alex Certify ಪ್ರೀತಿಸಿ ಮದುವೆಯಾದ ಪತ್ನಿ ಶವದೊಂದಿಗೆ ಕಾಡಿನಲ್ಲೇ ರಾತ್ರಿ ಕಳೆದ ಪತಿ, ಸಾವಿನ ರಹಸ್ಯ ನಿಗೂಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದ ಪತ್ನಿ ಶವದೊಂದಿಗೆ ಕಾಡಿನಲ್ಲೇ ರಾತ್ರಿ ಕಳೆದ ಪತಿ, ಸಾವಿನ ರಹಸ್ಯ ನಿಗೂಢ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಜಡಗನಹಳ್ಳಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಮೃತದೇಹದೊಂದಿಗೆ ಪತಿ ರಾತ್ರಿ ಕಳೆದ ಘಟನೆ ವರದಿಯಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಡಗನಹಳ್ಳಿಯವರಾದ 19 ವರ್ಷದ ಯುವತಿ ಮತ್ತು 20 ವರ್ಷದ ಅಭಿಷೇಕ್ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಯುವತಿ ಚಿಕ್ಕಮಗಳೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದು, ಒಂದೇ ಗ್ರಾಮದವರಾದ ಇಬ್ಬರು ಒಟ್ಟಿಗೆ ವಾಸವಾಗಿದ್ದರು. ಮದುವೆಗೆ ಮನೆಯವರು ವಿರೋಧ ಮಾಡಿರಲಿಲ್ಲ. ಆಪ್ರಾಪ್ತರಾಗಿದ್ದ ಕಾರಣ ಇವರ ಮದುವೆಗೆ ಮಾನ್ಯತೆ ಇರಲಿಲ್ಲ.

ಶುಕ್ರವಾರ ಸಂಬಂಧಿಕರ ಮದುವೆಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದ ಅಭಿಷೇಕ್ ವಾಪಸ್ ಮನೆಗೆ ಹೋಗದೆ ಜಡಗನಹಳ್ಳಿ ಸಮೀಪದ ಕಾಡಿನಲ್ಲಿ ಪತ್ನಿಯೊಂದಿಗೆ ರಾತ್ರಿ ಉಳಿದುಕೊಂಡಿದ್ದಾನೆ. ಬೆಳಗ್ಗೆ ಕಾಡಿಗೆ ತೆರಳಿದ್ದ ಗ್ರಾಮಸ್ಥರಿಗೆ ಇಬ್ಬರು ಅಲ್ಲಿ ಇರುವುದು ಕಂಡುಬಂದಿದೆ. ವಿಚಾರಿಸಿದಾಗ ಯುವತಿ ಮೃತಪಟ್ಟಿರುವುದು ಗೊತ್ತಾಗಿದೆ. ಅಭಿಷೇಕ್ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಸಾವಿನ ಕಾರಣ ನಿಗೂಢವಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...