ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. 26 ಕಡಾನೆಗಳ ಹಿಂಡು ಛತ್ರಮರ ದೇಗುಲದ ಬಳಿ ಎಂಟ್ರಿಕೊಟ್ಟಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಕಾಡಾನೆಗಳ ಗ್ಯಾಂಗ್ ಚಿಕ್ಕಮಗಳೂರು ನಗರ ಪ್ರವೇಶ ಮಾಡದಂತೆ ಇಂದಾವರ ಗ್ರಾಮದ ಸುತ್ತ ಅರಣ್ಯ ಇಲಾಖೆ, ಇಟಿಎಫ್ ಸಿಬ್ಬಂದಿ ಕಾವಲು ಹಾಕಿದ್ದಾರೆ.
ಕಳೆದ 20 ದಿನಗಳಿಂದ ಬೀಟಮ್ಮ ಗ್ಯಾಂಗ್ ನ ಕಾಡಾನೆಗಳು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಮುತ್ತೋಡಿ ಅರಣ್ಯಕ್ಕೆ ಕಾಡಾನೆ ಓಡಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ. ಒಮ್ಮೆ ಮುತ್ತೋಡಿ ಅರಣ್ಯಕ್ಕೆ ಹೋಗಿದ್ದ ಕಾಡಾನೆ ಹಿಂಡು ಈಗ ಮತ್ತೊಮ್ಮೆ ವಾಪಾಸ್ ಆಗಿದ್ದು, ಇಂದಾವರ ಗ್ರಾಮದಲ್ಲಿ ಬೀಡು ಬಿಟ್ಟಿದೆ.
ಬೀಟಮ್ಮ ಗ್ಯಾಂಗ್ ಕಾಡಾನೆಗಳು ಬಲಿಷ್ಠವಾಗಿದ್ದು, ಸಿಕ್ಕ ಸಿಕ್ಕ ಕಡೆ ದಾಳಿ ನಡೆಸುತ್ತಿವೆ. ಇವುಗಳ ಕಾರ್ಯಾಚರಣೆಗಾಗಿ ತಂದಿದ್ದ ಕುಮ್ಕಿ ಆನೆಗಳ ಮೇಲೂ ದಾಳಿ ನಡೆಸಿದ್ದವು. ಈಗ ರಾತ್ರೋ ರಾತ್ರಿ ಇಂದಾವರ ಗ್ರಾಮದಲ್ಲಿ 26 ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ.