
ಚಿಕ್ಕಬಳ್ಳಾಪುರ: ಪತ್ನಿ ಅಗಲಿಕೆಯಿಂದ ಮನನೊಂದ ಪತಿ ಆಕೆಯ ಸಮಾಧಿ ಬಳಿಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ.
ತೀಮಾಕಹಳ್ಳಿಬಳಿ ಸ್ಮಶಾನದಲ್ಲಿ ಪತ್ನಿ ಸಮಾಧಿ ಬಳಿಯೇ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 38 ವರ್ಷದ ಗುರುಮೂರ್ತಿ ಮೃತ ವ್ಯಕ್ತಿ.
ಪತ್ನಿ ಮೌನಿಕಾ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿಯ ಸಾವಿನ ನೋವಿನಲ್ಲಿದ್ದ ಗುರುಮೂರ್ತಿ, ಇಂದು ಪತ್ನಿ ಸಮಾಧಿ ಪೂಜೆ ನೆರವೇರಿಸಿ ಬಳಿಕ ಅಲ್ಲಿಯೇ ಮರಕ್ಕೆ ನೇನು ಬಿಗಿದುಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.