ಚಿಕ್ಕಬಳ್ಳಾಪುರ: ಹೊಸ ಬೈಕ್ ಖರೀದಿಸಿ ಸಂತೋಷದಿಂದ ಬೈಕ್ ರೈಡ್ ಮಾಡುತ್ತಿದ್ದ ಯುವಕ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರಸಂದ್ರದ ಗುಡಿಬಂಡೆ ಮಾರ್ಗದ ಬೊಮ್ಮಗಾನಹಳ್ಳಿಯಲ್ಲಿ ನಡೆದಿದೆ.
ಚಿಕ್ಕನಾರನಪ್ಪಹಳ್ಳಿಯ ಅಶ್ವತ್ಥನಾರಾಯಣ (32) ಮೃತ ಯುವಕ. ಇತ್ತೀಚೆಗಷ್ಟೇ ಅಶ್ವತ್ಥನಾರಾಯಣ ಹೊಸ ಬೈಕ್ ಖರೀದಿಸಿದ್ದರು. ಹೊಸ ಬೈಕ್ ನಲ್ಲಿ ತೆರಳುವಾಗಲೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.