
ಚಿಕ್ಕಬಳ್ಳಾಪುರ: ಸಹೋದರನನ್ನೇ ಹತ್ಯೆಗೈದಿದ್ದ ಕೊಲೆ ಅಪರಾಧಿಗೆ ನ್ಯಾಯಾಲಯ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಮೋಹನ್ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. 2021ರ ಮೇ 11 ರಂದು ಚಿಕ್ಕಬಳ್ಳಾಪುರದ ಚೇಳೂರಿನಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ಪ್ರಕಟಿಸಿದೆ.
ಒಳ್ಳೆ ಹುಡುಗಿ ನೋಡಿ ಮದುವೆ ಮಾಡಿಲ್ಲ ಎಂಬ ಕಾರಣಕ್ಕೆ ಮೋಹನ್, ತನ್ನ ತಂದೆಯ ಜೊತೆ ಜಗಳ ಮಾಡಿ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದ. ಈ ವೇಳೆ ಸಹೋದರ ಮೋಹನ್ ನನ್ನು ತಡೆದಿದ್ದಾನೆ. ಅಪ್ಪನ ಹತ್ಯೆಗೆ ಅಡ್ಡ ಬಂದ ತಮ್ಮನನ್ನೇ ಮೋಹನ್ ಕೊಲೆ ಮಾಡಿದ್ದ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.