ಚಿಕ್ಕಬಳ್ಳಾಪುರ: ಕೇತೇನಹಳ್ಳಿ ಜಲಪಾತ ನೋಡಲೆಂದು ಬಂದ ಮಹಿಳಾ ಟೆಕ್ಕಿ ಜಾರಿಬಿದ್ದು ಕಾಲು ಮುರಿದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮುಂಬೈ ಮೂಲದ ಅರ್ಪಿತಾ ಕಾಲುಮುರಿದುಕೊಂಡ ಮಹಿಳೆ. ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಪಿತಾ, ಸ್ನೇಹತರೊಂದಿಗೆ ಕೇತೇನಹಳ್ಳಿ ಜಲಪಾತ ನೋದಲು ಹೋಗಿದ್ದರು. ಜಲಪಾತದಲ್ಲಿ ಆಟವಾಡಿ ವಾಪಾಸ್ ಆಗುವಾಗ ಕಾಡಿನ ದಾರಿಯಲ್ಲಿ ಜಾರಿ ಬಿದ್ದಿದ್ದಾರೆ. ಪರಿಣಾಮ ಕಾಲು ಮುರಿದಿದ್ದು, ಸ್ನೇಹಿತರು ಹಾಗೂ ಸ್ಥಳೀಯರು 2 ಕಿ.ಮೀವರೆಗೆ ಮಹಿಳೆಯನ್ನು ಸ್ಟ್ರೆಚರ್ ಮೂಲಕ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಅರ್ಪಿತಾ ದಾಖಲಾಗಿದ್ದಾರೆ. ಘಟನೆ ಬಳಿಕ ಕೇತೇನಹಳ್ಳಿ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಅರಣ್ಯದೋಳಗೆ ಪ್ರವೇಶ ಮಡದಂತೆ ಅರಣ್ಯಾಧಿಕಾರು ಸೂಚಿಸಿದ್ದು, ಸ್ಥಳದಲ್ಲಿ ಅರಣ್ಯ ಇಲಖೆ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.