ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಪ್ರಯಾಣಿಕನೊಬ್ಬ ಕೋಳಿ ಮಾಂಸದೊಂದಿಗೆ ಬಸ್ ಹತ್ತಿದ ಕಾರಣಕ್ಕೆ ನಿರ್ವಾಹಕ ಬಸ್ ಇಳಿಯುವಂತೆ ಒತ್ತಾಯಿಸಿದ್ದಾರೆ.
ಬಸ್ ಚಾಲಕ ಪ್ರಯಾಣಿಕರಿದ್ದ ಬಸ್ ಅನ್ನು ಪೊಲೀಸ್ ಠಾಣೆಗೆ ತಂದಿದ್ದಾರೆ. ತುಂಬೆ ಬಳಿ ಘಟನೆ ನಡೆದಿದೆ. ಸುರೇಶ್ ಎಂಬುವರು ತುಂಬೆಯಲ್ಲಿ ಕೈಯಲ್ಲಿ ಚೀಲವೊಂದನ್ನು ಹಿಡಿದು ಸ್ಟೇಟ್ ಬ್ಯಾಂಕ್ -ಪುತ್ತೂರು ಕೆಎಸ್ಆರ್ಟಿಸಿ ಬಸ್ ಹತ್ತಿದ್ದಾರೆ.
ನಿರ್ವಾಹಕ ಏನೆಂದು ಪ್ರಶ್ನಿಸಿದಾಗ ಕೋಳಿ ಮಾಂಸ ಎಂದು ತಿಳಿಸಿದ್ದಾರೆ. ಈ ವೇಳೆ ನಿರ್ವಾಹಕ ಬಸ್ ನಿಂದ ಇಳಿಯುವಂತೆ ತಿಳಿಸಿದ್ದು, ಇದಕ್ಕೆ ಸುರೇಶ ಒಪ್ಪದಿದ್ದಾಗ ವಾಗ್ವಾದ ನಡೆದಿದೆ. ಸುರೇಶ್ ಬಸ್ ನಿಂದ ಇಳಿಯದ ಕಾರಣ ಪ್ರಯಾಣಿಕರು ತುಂಬಿದ್ದ ಬಸ್ ಅನ್ನು ಸೀದಾ ಪೊಲೀಸ್ ಠಾಣೆಗೆ ತರಲಾಗಿದೆ.
ಬಸ್ ಗಳಲ್ಲಿ ಕೋಳಿ, ಮೀನು, ಮಾಂಸ ತರುವಂತಿಲ್ಲ ಎಂದು ಕಂಡಕ್ಟರ್ ಹೇಳಿದ್ದು, ಇದಕ್ಕೆ ನಿರ್ವಾಹಕ ಒಪ್ಪದಿದ್ದಾಗ ಬಸ್ ಅನ್ನು ಚಾಲಕ ಮತ್ತು ನಿರ್ವಾಹಕ ಪೊಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಇಳಿಸಿದ್ದಾರೆ. ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.