
ಮಂಡ್ಯ: ಕೋಳಿ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮಳವಳ್ಳಿ ತಾಲೂಕಿನ ಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಯರಾಮ ಅವರ ಮಗ ಗಿರೀಶ್ ಮೃತ ಯುವಕ. ಗ್ರಾಮದ ಸಾಗರ್, ತಾಯಮ್ಮ, ಸಹನಾ ಆರೋಪಿಗಳಾಗಿದ್ದು, ಸಾಗರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 6ರಂದು ಗಿರೀಶ್ ಗೆ ಸೇರಿದ ಕೋಳಿಗಳು ತಾಯಮ್ಮ ಅವರ ಮನೆ ಬಳಿ ಕಾಳು ತಿನ್ನುತ್ತಿದ್ದವು. ಈ ವೇಳೆ ತಾಯಮ್ಮ, ಮಕ್ಕಳಾದ ಸಾಗರ್, ಸಹನಾ ಪ್ರಶ್ನಿಸಿದ್ದಾರೆ. ಕೋಳಿ ವಿಚಾರಕ್ಕೆ ಜಗಳ ಮಾಡಿ ಗಿರೀಶ್ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ನನ್ನು ಕನಕಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.