ನವದೆಹಲಿ: ಹಕ್ಕಿಜ್ವರ ಭೀತಿಯಿಂದಾಗಿ ಜನ ಚಿಕನ್, ಮೊಟ್ಟೆಯಿಂದ ದೂರ ಸರಿದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಭೀತಿ ಬೇಡ ಚಿಕನ್, ಮೊಟ್ಟೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ.
ಹಕ್ಕಿಜ್ವರದಿಂದಾಗಿ ಕುಕ್ಕುಟೋದ್ಯಮಕ್ಕೆ ಭಾರಿ ನಷ್ಟ ಉಂಟಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಭರವಸೆ ನೀಡಲಾಗಿದೆ. ಹಕ್ಕಿಜ್ವರ ಕಾಣಿಸಿಕೊಳ್ಳದ ರಾಜ್ಯಗಳಲ್ಲಿ ಕೋಳಿ ಮತ್ತು ಮೊಟ್ಟೆ ಮಾರಾಟಕ್ಕೆ ಅನುಮತಿ ಕಲ್ಪಿಸುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಮೊಟ್ಟೆ ಮತ್ತು ಚಿಕನ್ ಸುರಕ್ಷಿತವೆಂದು ತಿಳಿಸಲಾಗಿದೆ.
ಅರ್ಧಗಂಟೆ ಕಾಲ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಬೇಯಿಸುವುದರಿಂದ ಹಕ್ಕಿ ಜ್ವರ ಇರುವುದಿಲ್ಲ. ಚೆನ್ನಾಗಿ ಬೇಯಿಸಿದ ಮೊಟ್ಟೆ ಮತ್ತು ಚಿಕನ್ ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.