ಸುಕ್ಮಾ: ಛತ್ತೀಸ್ ಗಡದ ಸುಕ್ಮಾದಲ್ಲಿ ಕಳೆದ ವಾರ ನಕ್ಸಲರು ಸಿಡಿಸಿದ್ದ ಐಇಡಿ ಸ್ಫೋಟದಲ್ಲಿ 9 ಜನ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಘಟನೆ ಬೆನ್ನಲ್ಲೇ ನಕ್ಸಲರ ವಿರುದ್ಧ ಕಾರ್ಯಾಚಾರಣೆ ಚುರುಕುಗೊಂಡಿದೆ. ಸುಕ್ಮಾದಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಸುಕ್ಮಾ-ಬಿಜಾಪುರ ಗಡಿ ಪ್ರದೇಶದಲ್ಲಿ ನಕ್ಸಲರು ಬಿಯರ್ ಬಾಟಲ್ ನಲ್ಲಿ ಐಇಡಿ ಇಟ್ಟು ಸ್ಫೊಟಿಸಲು ಮುಂದಾಗಿರುವುದು ಪತ್ತೆಯಾಗಿದೆ. ಇದೇ ವೇಳೆ ವಿಷೇಶ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಭದ್ರತಾಪಡೆಗಳ ಗುಂಡೇಟಿಗೆ ಹಲವು ನಕ್ಸಲರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.