alex Certify 10 ವರ್ಷದ ಹಿಂದೆ ದೂರವಾಗಿದ್ದ ಪ್ರೇಮಿಗಳು ಇನ್ ಸ್ಟಾಗ್ರಾಂ ಮೂಲಕ ಮತ್ತೆ ಪರಿಚಯ; ಮದುವೆಯಾಗಿದ್ದ ತಮ್ಮ ತಮ್ಮ ಸಂಗಾತಿ ಬಿಟ್ಟು ಪರಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ವರ್ಷದ ಹಿಂದೆ ದೂರವಾಗಿದ್ದ ಪ್ರೇಮಿಗಳು ಇನ್ ಸ್ಟಾಗ್ರಾಂ ಮೂಲಕ ಮತ್ತೆ ಪರಿಚಯ; ಮದುವೆಯಾಗಿದ್ದ ತಮ್ಮ ತಮ್ಮ ಸಂಗಾತಿ ಬಿಟ್ಟು ಪರಾರಿ…!

Chhattisgarh: Separated Years Ago, Lovers Reunite On Instagram Live, Elope Leaving Their Spouses

ವರ್ಷಗಳ ಹಿಂದೆ ಬೇರ್ಪಟ್ಟ ಜೋಡಿ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಮತ್ತೆ ಒಂದಾಗಿ, ತಮ್ಮ ತಮ್ಮ ಸಂಗಾತಿ ಮತ್ತು ಕುಟುಂಬವನ್ನು ಬಿಟ್ಟು ಓಡಿಹೋದ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.

ಪಂಕಜ್ ಮಿಶ್ರಾ ಎಂಬ ವ್ಯಕ್ತಿ 10 ವರ್ಷದ ಹಿಂದೆ ಓರ್ವಳನ್ನು ಪ್ರೀತಿಸಿದ್ದ, ಆದರೆ ಅವಳಿಂದ ಬೇರ್ಪಟ್ಟು ಬೇರೆಯವರೊಂದಿಗೆ ಮದುವೆಯಾಗಿದ್ದ.

ಇತ್ತೀಚಿಗೆ ಇನ್ ಸ್ಟಾಗ್ರಾಂ ನಲ್ಲಿ ಮತ್ತೆ ತನ್ನ ಹಳೆಯ ಸಂಗಾತಿಯನ್ನ ಕಂಡಿದ್ದು ಇಬ್ಬರೂ ನಿರಂತರ ಮಾತುಕತೆ ನಡೆಸಿದ್ದಾರೆ. ಬಳಿಕ ಮತ್ತೆ ಇಬ್ಬರೂ ಒಂದಾಗಲು ಪ್ಲಾನ್ ಮಾಡಿ ತಮ್ಮ ತಮ್ಮ ಸಂಗಾತಿಗಳನ್ನು ಬಿಟ್ಟು ಹೋಗಿದ್ದಾರೆ.

ಅತ್ತ ಓಡಿ ಹೋದ ಪಂಕಜ್ ಮಿಶ್ರಾನ ಹೆಂಡ್ತಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಮತ್ತು ಮಿಶ್ರಾನೊಂದಿಗೆ ಪರಾರಿಯಾದ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಅವರಿಬ್ಬರ ಸಂಗಾತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಗಂಡ ಪರಾರಿಯಾಗುವ ಮೊದಲು ಪಂಕಜ್ ಪತ್ನಿಗೆ ಅನುಮಾನ ಬಂದು ಆತನನ್ನು ವಿಚಾರಿಸಿದಾಗ, ಆತ ಗೆಳತಿಯೊಂದಿಗೆ ಪರಾರಿಯಾಗುವ ಮೊದಲು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಎರಡು ಮಕ್ಕಳ ತಾಯಿಯಾಗಿರುವ ಉತ್ತರ ಪ್ರದೇಶದ ಮಹಿಳೆ ತನ್ನ ಪತಿ ಮತ್ತು ಮಕ್ಕಳನ್ನು ಬಿಟ್ಟು ಪಂಕಜ್ ಜೊತೆ ಓಡಿಹೋಗಿದ್ದಾಳೆ. ಪ್ರೇಮಿಗಳ ವಿರುದ್ಧ ಅಧಿಕಾರಿಗಳು ದೂರು ದಾಖಲಿಸಿದ್ದು, ಸದ್ಯ ಪರಾರಿಯಾಗಿರುವ ಅವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...