ಛತ್ತೀಸ್ ಗಢದ ವ್ಯಕ್ತಿಯೊಬ್ಬ ದೇವರಿಗೆ ಮೇಕೆ ಬಲಿಕೊಟ್ಟಿದ್ದು, ವಿಚಿತ್ರವೆಂದರೆ ಮೇಕೆಯ ಕಣ್ಣು ಆತನ ಸಾವಿಗೆ ಕಾರಣವಾಗಿದೆ.
ವ್ಯಕ್ತಿ ಮೇಕೆಯನ್ನು ಬಲಿಕೊಟ್ಟರೂ, ಅದರ ‘ದುಷ್ಟ ಕಣ್ಣಿನಿಂದ’ ತಪ್ಪಿಸಿಕೊಳ್ಳಲು ವಿಫಲನಾಗಿದ್ದಾನೆ. ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯ ಬಗರ್ ಸಾಯಿ ಎಂಬ 50 ವರ್ಷದ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದ ನಂತರ ದೇವಸ್ಥಾನದಲ್ಲಿ ಮೇಕೆ ಬಲಿ ನೀಡಲು ಯೋಜಿಸಿದ್ದ.
ಬಗರ್ ಸಾಯಿ ಅವರು ಮದನ್‌ಪುರ ಗ್ರಾಮದ ಇತರ ನಿವಾಸಿಗಳೊಂದಿಗೆ ಭಾನುವಾರ ಖೋಪಾಧಾಮ್‌ಗೆ ಆಗಮಿಸಿ ಅಲ್ಲಿ ಮೇಕೆಯನ್ನು ಬಲಿ ನೀಡಿದರು.
ಬಲಿಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರು ಆಡಿನ ಮಾಂಸವನ್ನು ಬೇಯಿಸಿ ಊಟಕ್ಕೆ ಕುಳಿತರು. ಬೇಯಿಸಿದ ಮಾಂಸದಿಂದ ಮೇಕೆಯ ಕಣ್ಣನ್ನು ಎತ್ತಿಕೊಂಡ ಬಗರ್ ಗೆ ಅದು ತನ್ನ ಬಲಿ ಪಡೆಯುತ್ತದೆ ಎಂದು ತಿಳಿದಿರಲಿಲ್ಲ.
ಮೇಕೆಯ ಕಣ್ಣನ್ನು ನುಂಗಲು ಪ್ರಯತ್ನಿಸಿದಾಗ ಗಂಟಲಿಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ, ಊಟದ ವೇಳೆ ಮೇಕೆ ಕಣ್ಣು ಗಂಟಲಲ್ಲಿ ಸಿಲುಕಿ ಬಗರ್ ಉಸಿರಾಡಲು ಹರಸಾಹಸ ಪಡುತ್ತಿದ್ದರಿಂದ ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.