ರಾಯ್ ಪುರ: 8 ವರ್ಷದ ಬಾಲಕಿಯನ್ನು ಆಕೆಯ 6 ಮಂದಿ ಅಪ್ರಾಪ್ತ ಸೋದರಸಂಬಂಧಿಗಳು ಮತ್ತು ಅವರ ಸ್ನೇಹಿತ ಎರಡು ತಿಂಗಳಿನಿಂದ ಅತ್ಯಾಚಾರವೆಸಗಿದ್ದಾರೆ. ಆನ್ ಲೈನ್ ತರಗತಿಗಳ ನೆಪದಲ್ಲಿ ಅಪ್ರಾಪ್ತ ಹುಡುಗರು ಸ್ಮಾರ್ಟ್ ಫೋನ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿ ಉತ್ತೇಜಿತರಾಗಿ ಇಂತಹ ಕೃತ್ಯವೆಸಗಿದ್ದಾರೆನ್ನಲಾಗಿದೆ.
ಘೋರ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳು 6 ರಿಂದ 13 ವರ್ಷ ವಯಸ್ಸಿನವರು ಮತ್ತು ಛತ್ತೀಸ್‌ಗಢದ ಅಂಬಿಕಾಪುರ ಜಿಲ್ಲೆಯಲ್ಲಿ ಅವಿಭಕ್ತ ಕುಟುಂಬದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಅಪ್ರಾಪ್ತರು ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾರೆ. ಮತ್ತು ಅವರ ಸ್ನೇಹಿತನಾಗಿದ್ದ ಮತ್ತೊಬ್ಬ ಹುಡುಗನನ್ನು ಸೇರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ಕೊಟ್ಟು ಗಮನಿಸದಿರುವದು ಎಷ್ಟು ಅಪಾಯಕಾರಿ ಎಂಬುದನ್ನು ತನಿಖಾಧಿಕಾರಿಗಳು ತೋರಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಕ್ಕಳು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಪೋರ್ನ್ ನೋಡುತ್ತಿರುವುದು ಕುಟುಂಬ ಸದಸ್ಯರಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ, ಸೋದರ ಸಂಬಂಧಿಗಳು ಪೋರ್ನ್ ವೀಕ್ಷಿಸಿ, 8 ವರ್ಷದ ಬಾಲಕಿ ಮೇಲೆ ಇಂತಹ ಕೃತ್ಯವೆಸಗಿದ್ದು, ಹೆಚ್ಚಿನವರು ಜೊತೆಯಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಬಾಲಕಿಯ ಪೋಷಕರು ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ಯುವವರೆಗೂ ಘಟನೆ ಬೆಳಕಿಗೆ ಬಂದಿರಲಿಲ್ಲ. ಬಾಲಕಿ ತೀವ್ರ ಹೊಟ್ಟೆ ನೋವು ಎಂದು ಹೇಳಿಕೊಂಡಿದ್ದು, ಪೋಷಕರು ಆಸ್ಪತ್ರಗೆ ಕರೆದೊಯ್ದಾಗ ವಿಷಯ ಬೆಳಕಿಗೆ ಬಂದಿದೆ.
7 ಮಕ್ಕಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಅವರು ಬಾಲಾಪರಾಧ ಮಂಡಳಿಯ ಮುಂದೆ ಹಾಜರಾಗಲಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಪುನರಾವರ್ತಿತ ಅತ್ಯಾಚಾರ ನಡೆದಿದ್ದರೂ ಏಕೆ ಪತ್ತೆಯಾಗಿಲ್ಲ ಎಂಬುದರ ಬಗ್ಗೆ ಪೊಲೀಸರು ಪರಿಶೀಲಿಸಿದಾಗ ಕುಟುಂಬಗಳು ಸಂಪರ್ಕ ಹೊಂದಿದ ಮನೆಗಳಲ್ಲಿ ವಾಸಿಸುವ ಕಾರಣ, ಮಕ್ಕಳು ಕೊಠಡಿಗಳನ್ನು ವರ್ಗಾಯಿಸುತ್ತಾರೆ, ಬದಲಿಸುತ್ತಾರೆ ಎನ್ನುವುದು ಗೊತ್ತಾಗಿದೆ. ಮಕ್ಕಳು ಆಟವಾಡುತ್ತಿದ್ದಾರೆ ಅಥವಾ ಆನ್ ಲೈನ್ ಕೋರ್ಸ್ ವರ್ಕ್ ಮಾಡುತ್ತಿದ್ದಾರೆ ಎಂದು ಕುಟುಂಬದವರು ಭಾವಿಸಿರುತ್ತಾರೆ.
ಆನ್ ಲೈನ್ ಶಿಕ್ಷಣಕ್ಕಾಗಿ ಮಕ್ಕಳಿಗೆ ಹಸ್ತಾಂತರಿಸಲಾದ ಸ್ಮಾರ್ಟ್ ಫೋನ್‌ನಲ್ಲಿ, ಪೊಲೀಸರು ಅನೇಕ ಪೋರ್ನ್ ಚಲನಚಿತ್ರಗಳನ್ನು ಪತ್ತೆ ಮಾಡಿದ್ದಾರೆ.
ಹುಡುಗಿಯ ಪೋಷಕರು ಪ್ರಕರಣವನ್ನು ‘ಹಿಂತೆಗೆದುಕೊಳ್ಳಲು’ ಪ್ರಯತ್ನಿಸಿದರು, ಆದರೆ ಪೊಲೀಸರು ಅವರಿಗೆ ತಿಳಿಹೇಳಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಇಂತಹ ಸಂದರ್ಭಗಳಲ್ಲಿ ತನಿಖೆಗಳನ್ನು ನಿಲ್ಲಿಸಲಾಗುವುದಿಲ್ಲ ಮತ್ತು ನಿಲ್ಲಿಸಬಾರದು ಎಂದು ಕುಟುಂಬಕ್ಕೆ ಸಲಹೆ ನೀಡಿದ್ದಾರೆ. ಅಪ್ರಾಪ್ತ ಬಾಲಕಿಗೆ ಕೌನ್ಸೆಲಿಂಗ್ ನಡೆಯುತ್ತಿದೆ.