ರಾಯಪುರ: ನಿವೃತ್ತ ಉದ್ಯೋಗಿಗಳಿಗೆ ಆದಾಯ ಕಲ್ಪಿಸುವ ನಿಟ್ಟಿನಲ್ಲಿ ಛತ್ತೀಸ್ ಗಢ ರಾಜ್ಯ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿದ್ದು, ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ 17,000 ಕೋಟಿ ರೂ.ಗಳನ್ನು ನವೆಂಬರ್ 2004 ರಿಂದ ಹಿಂಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರವು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (PFRDA) ಪ್ರಸ್ತಾವನೆಯನ್ನು ಕಳುಹಿಸಿದೆ. ಈ ನಿರ್ಧಾರದಿಂದ ಹಳೆಯ ಪಿಂಚಣಿ ಯೋಜನೆಯು ನೌಕರರ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡುತ್ತದೆ.
BIG NEWS: KSRTC ಬಸ್-ಆಟೋ ಭೀಕರ ಅಪಘಾತ; ಬಾಲಕಿ ದುರ್ಮರಣ
ಹಳೆಯ ಪಿಂಚಣಿ ಯೋಜನೆಯು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಅಲ್ಲದೆ, ಹೊಸ ಪಿಂಚಣಿ ಯೋಜನೆ ಹಿನ್ನೆಲೆ ಸರ್ಕಾರಿ ನೌಕರರ ವೇತನದಿಂದ ಮಾಸಿಕವಾಗಿ 10%ರಷ್ಟು ಕಡಿತಗೊಳ್ಳುತ್ತಿದ್ದ ತೆರಿಗೆಯನ್ನು ಏಪ್ರಿಲ್ 1 ರಿಂದ ರದ್ದುಗೊಳಿಸಲಾಗುವುದು ಎಂದು ಹೇಳಿದೆ. ಸಾಮಾನ್ಯ ಭವಿಷ್ಯ ನಿಧಿ ನಿಯಮದ ಪ್ರಕಾರ ಮೂಲ ವೇತನದ ಕನಿಷ್ಠ 12 ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.
ಇದೇ ರೀತಿಯಾದ ರಾಜಸ್ಥಾನ ಸರ್ಕಾರದ ಮನವಿಯನ್ನು ಕೇಂದ್ರ ತಿರಸ್ಕರಿಸಿತ್ತು. ರಾಜಸ್ಥಾನ ಸರ್ಕಾರವು, 2004 ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ 39,000 ಕೋಟಿ ರೂ.ಗಳನ್ನು ಹಿಂಪಡೆದು ಸಾಮಾನ್ಯ ಭವಿಷ್ಯ ನಿಧಿಯ ಅಡಿಯಲ್ಲಿ ವರ್ಗಾಯಿಸುವುದಾಗಿ ಹೇಳಿತ್ತು. ಆದ್ದರಿಂದ ಕೇಂದ್ರ ಮಾನ್ಯತೆ ನೀಡಿರಲಿಲ್ಲ.