ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಮಹತ್ವದ ನಿರ್ಧಾರವನ್ನು ಮಧ್ಯ ಪ್ರದೇಶದ ಭೋಪಾಲ್ನ ಛತ್ತರ್ಪುರ ಜಿಲ್ಲೆಯ ಚಾಂದ್ಲಾ ವಿಧಾನಸಭಾ ಕ್ಷೇತ್ರದ ಮೊಹೋಯಿ ಗ್ರಾಮದ ನಿವಾಸಿಗಳು ಮುಂದಾಗಿದ್ದಾರೆ. ಈ ಜಿಲ್ಲೆಯಲ್ಲಿ ಜಾತಿಗೆ ಸಂಬಂಧಿಸಿದ ಊರಿನ ಹೆಸರು ಹಾಗೂ ಶಾಲೆಯ ಹೆಸರನ್ನು ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ.
ಈ ಗ್ರಾಮವನ್ನು ಚಮರನ್ ಪುರ್ವಾ ಹಾಗೂ ಶಾಲೆಯ ಹೆಸರನ್ನು ಚಮ್ರನ್ ಪೂರ್ವಾ ಶಾಲೆ ಎಂದು ಕರೆಯಲಾಗುತ್ತದೆ. ಇದು ಒಂದು ನಿರ್ದಿಷ್ಟ ಜಾತಿಗೆ ಸಂಬಂಧಿಸಿದ ಹೆಸರಾಗಿದೆ ಅಂತಾರೆ ಗ್ರಾಮಸ್ಥರು.
ಈ ರೀತಿ ಜಾತಿಯ ಹೆಸರನ್ನು ಗ್ರಾಮಕ್ಕೆ ಇಟ್ಟಿರೋದು ಇವರಿಗೆ ಮುಜುಗರ ಎನಿಸುವ ವಿಚಾರವಂತೆ. ತಾವಿರುವ ಊರು ಹಾಗೂ ತಮ್ಮ ಮಕ್ಕಳು ಓದುವ ಶಾಲೆಯು ಇಂತಹ ಹೆಸರನ್ನ ಹೊಂದಿದ್ರೆ ಅದು ಜಾತಿ ವ್ಯವಸ್ಥೆ ಮೇಲೆ ಇನ್ನಷ್ಟು ಪ್ರಭಾವ ಬೀರುತ್ತೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ.