ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಅದನ್ನು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸದಿರಿ. ಏಕೆಂದರೆ ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಎದೆ ನೋವು ಹಾರ್ಟ್ ಅಟ್ಯಾಕ್ ನ ಲಕ್ಷಣವಾಗಿರಬಹುದು.
ಇತರ ಅವಧಿಗೆ ಹೋಲಿಸಿದರೆ ಚಳಿಗಾಲದಲ್ಲಿ ಹೃದಯಾಘಾತವಾಗುವುದು ಶೇ.50ರಷ್ಟು ಹೆಚ್ಚು. ಆಗ ದೇಹದ ತಾಪಮಾನವೂ ಕಡಿಮೆಯಾಗುತ್ತದೆ.
ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆಯಾಗದ ಕಾರಣ ನೀರು ಕುಡಿಯುವ ಗೋಜಿಗೇ ಹೋಗುವುದಿಲ್ಲ. ಹಾಗಾಗಿ ಮಂದವಾಗುವ ರಕ್ತ ಬಹುಬೇಗ ಹೆಪ್ಪುಗಟ್ಟುತ್ತದೆ.
ಹಾಗಾಗಿ ಚಳಿಗಾಲದಲ್ಲಿ ಚೆನ್ನಾಗಿ ನೀರು ಕುಡಿಯುವುದು ಎಷ್ಟು ಮುಖ್ಯವೋ, ನೀರಿನಂಶ ಇರುವ ಪದಾರ್ಥಗಳನ್ನು ತಿನ್ನುವುದೂ ಅಷ್ಟೇ ಮುಖ್ಯ.
ಹೊರಗಿನ ತಿನಿಸುಗಳು ಬಾಯಿಗೇನೋ ರುಚಿ ಕೊಡುತ್ತವೆ ಆದರೆ ಇದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳಾಗುವುದೇ ಹೆಚ್ಚು. ಹಾಗಾಗಿ ಸಿಹಿ ಪದಾರ್ಥಗಳನ್ನು ದೂರವಿಡಿ ಮತ್ತು ಕಡಿಮೆ ಎಣ್ಣೆಯಂಶ ಇರುವ ತಿನಿಸುಗಳನ್ನು ತಿನ್ನಿ.
ಚಳಿಗಾಲದಲ್ಲಿ ಆಲ್ಕೋಹಾಲ್ ಸೇವನೆ ಕೆಲವರಿಗೆ ಅನಿವಾರ್ಯವಾಗಿರಬಹುದು. ಆದರೆ ಅದು ಮಿತಿಯಲ್ಲಿರಲಿ. ಆಲ್ಕೋಹಾಲ್ ನಿಂದ ದೂರವಿದ್ದಷ್ಟು ಒಳ್ಳೆಯದು. ಚಳಿ ಎಂಬ ಕಾರಣಕ್ಕೆ ನಿತ್ಯ ಮಾಡುವ ಯೋಗ, ವಾಕಿಂಗ್, ವ್ಯಾಯಾಮಗಳನ್ನು ನಿಲ್ಲಿಸದಿರಿ.