![](https://kannadadunia.com/wp-content/uploads/2023/05/r-ashoka-dh-file-1134800-1660115847-1137865-1661014241.jpg)
ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಶಿಕ್ಷಣ ಸಚಿವರ ಪಾಡೇ ಹೀಗಾದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಚೆಕ್ ಬೌನ್ಸ್ ಅಂದ್ರೆ ಮೋಸ ಮಾಡಿದ್ದಾರೆ ಎಂದರ್ಥ. ತಕ್ಷಣ ಮಧು ಬಂಗಾರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೋರ್ಟ್ ಆದೇಶ ನೀಡಿದರೂ ಇನ್ನೂ ಸಿಎಂ ಸಿದ್ದರಾಮಯ್ಯ ಸಚಿವರ ರಾಜೀನಾಮೆ ಪಡೆದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಲೂಟಿ ಮಾಡಲು ಒಂಟಿ ಕಾಲಲ್ಲಿ ನಿಂತಿದೆ. ಶಿಕ್ಷಣ ಇಲಾಖೆ ಸಚಿವರೇ ಮೋಸ ಮಾಡಿದ್ದಾರೆ. ಮಧು ಬಂಗಾರಪ್ಪ ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.