alex Certify ಕೇವಲ ಒಂದೂವರೆ ರೂಪಾಯಿಗೆ ಉಪಹಾರ ನೀಡ್ತಾರೆ ಈ ವೃದ್ದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಒಂದೂವರೆ ರೂಪಾಯಿಗೆ ಉಪಹಾರ ನೀಡ್ತಾರೆ ಈ ವೃದ್ದ ದಂಪತಿ

ಚೆನ್ನೈನ ಅಡಂಬಾಕ್ಕಂನ ಬಾಡಿಗೆ ಮನೆಯೊಂದರಲ್ಲಿ ವಾಸಿಸುವ 70 ವರ್ಷದ ವೆರೋನಿಕಾ ಮತ್ತು ಆಕೆಯ ಪತಿ 72 ವರ್ಷದ ನಿಕೋಲಾಸ್, ಕಳೆದ ಎರಡು ದಶಕಗಳಿಂದ ಇಡ್ಲಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದರಲ್ಲೇನು ವಿಶೇಷ ಎಂದಿರಾ..?

ಇಂದಿನ ದಿನಗಳಲ್ಲಿ 10 ರೂಪಾಯಿಗೆ ಒಂದು ಇಡ್ಲಿ ಸಿಗುವುದೇ ಅಪರೂಪ. ಹಾಗಿರುವಾಗ ಈ ದಂಪತಿ 1.5 ರೂ.ಗೆ ಒಂದರಂತೆ ಇಡ್ಲಿ ಮಾರುತ್ತಾರೆ. ಬೆಳಿಗ್ಗೆ ಬೇಗನೇ ಕೆಲಸಕ್ಕೆಂದು ತೆರಳುವ ಮಂದಿಯ ಮನೆಗೆ ಖುದ್ದು ತೆರಳಿ ಇಡ್ಲಿ ತಲುಪಿಸುವ ಈ ಸಹೃದಯಿ ಮಹಿಳೆ, ಇದಕ್ಕೆಂದು ಪ್ರತ್ಯೇಕ ಶುಲ್ಕವನ್ನೂ ವಿಧಿಸುವುದಿಲ್ಲ.

ಭಾರೀ ಮಳೆ ಮಧ್ಯೆಯೇ ನಾಲ್ಕು ಕಿ.ಮೀ. ನಡೆದು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಬ್ಯಾಂಕ್ ಮ್ಯಾನೇಜರ್….!

ಪ್ರತಿ ನಿತ್ಯ 300 ರೂ.ಗಳಷ್ಟು ಇಡ್ಲಿ ಮಾರುವ ವೆರೋನಿಕಾ, ತಮ್ಮ ಪ್ರತಿನಿತ್ಯದ ಆದಾಯವನ್ನು ಮಾರನೆ ದಿನದ ಆಹಾರ ತಯಾರಿ ಮೇಲೆ ನೇರವಾಗಿ ಹೂಡುತ್ತಾರೆ. ತಾವು ಈ ಕೆಲಸವನ್ನು ಲಾಭಕ್ಕಿಂತಲೂ ಆತ್ಮತೃಪ್ತಿಗಾಗಿ ಮಾಡುತ್ತಿರುವುದಾಗಿ ವೆರೋನಿಕಾ ತಿಳಿಸುತ್ತಾರೆ.

ನಗರದ ಎಟಿಎಂ ಒಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ ವೆರೋನಿಕಾ ಪತಿ ನಿಕೋಲಾಸ್. ನಿಕೋಲಾಸ್‌ರ ಸಂಬಳದಿಂದಲೇ ದಂಪತಿ ತಮ್ಮ ದೈನಂದಿನ ಬದುಕು ಸಾಗಿಸುತ್ತಿದ್ದಾರೆ.

“ಮೊದಲಿಗೆ ಒಂದು ಇಡ್ಲಿಯನ್ನು 50ಪೈಸೆ ಹಾಗು 1ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈಗ ನನ್ನ ಮಡದಿ ಸಾಂಬಾರ್‌ ಮತ್ತು ಚಟ್ನಿಯೊಂದಿಗೆ 1.5ರೂಗೆ ಮಾರಾಟ ಮಾಡುತ್ತಿದ್ದಾರೆ,” ಎನ್ನುವ ನಿಕೋಲಾಸ್, “100ಕ್ಕೂ ಹೆಚ್ಚಿನ ಕುಟುಂಬಗಳ ನಮ್ಮ ಇಡ್ಲಿ ಸವಿಯುತ್ತವೆ. ನಾನು ಮತ್ತು ನನ್ನ ಮೂವರು ಪುತ್ರಿಯರ ನೆರವಿಲ್ಲದೇ ವೆರೋನಿಕಾ ಒಬ್ಬಳೇ ನೂರಾರು ಮಂದಿಗೆ ಆಹಾರ ಮಾಡಿ ಬಡಿಸುವ ಕೆಲಸದಲ್ಲಿ ಭಾಗಿಯಾಗಿದ್ದಾಳೆ. ಪ್ರತಿನಿತ್ಯ ಬೆಳಿಗ್ಗೆ 3 ಗಂಟೆಯಿಂದಲೇ ತನ್ನ ಕೆಲಸ ಆರಂಭಿಸುವ ವೆರೋನಿಕಾ ಇದನ್ನೆಲ್ಲಾ ಆತ್ಮತೃಪ್ತಿಗೆ ಮಾತ್ರವೇ ಮಾಡುತ್ತಿದ್ದಾಳೆ. ಎಷ್ಟೇ ಪ್ರಯತ್ನ ಪಟ್ಟರೂ ನಮಗೆ ಇದುವರೆಗೂ ವೃದ್ಧಾಪ್ಯ ಪಿಂಚಣಿ ಇನ್ನೂ ಸಿಕ್ಕಿಲ್ಲ,” ಎನ್ನುತ್ತಾರೆ.

ಸಾಮಾನ್ಯವಾಗಿ ದುಡ್ಡು ಕಡಿಮೆ ಇರುವ ಮಂದಿಯೇ ಅತ್ಯಂತ ಧಾರಾಳಿಗಳು ಎಂದು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ. ಇತ್ತೀಚೆಗೆ, ಕರ್ನಾಟಕದ ದೇಗುಲವೊಂದರ ಮುಂದೆ ಭಿಕ್ಷೆ ಬೇಡುವ ಕೆಂಪಜ್ಜಿ ಎಂಬ ಹಿರಿಯ ಮಹಿಳೆಯೊಬ್ಬರು ವರ್ಷಗಳಿಂದಲೂ ತಾವು ಕೂಡಿಟ್ಟಿದ್ದ 20,000 ರೂ.ಗಳನ್ನು ದೇವಸ್ಥಾನದ ಪ್ರಧಾನ ದೈವ ಆಂಜನೇಯ ಸ್ವಾಮಿಗೆ ಬೆಳ್ಳಿಯ ಹೊದಿಕೆ ಮಾಡಿಸಲೆಂದು ದೇವಸ್ಥಾನದ ಆಡಳಿತ ಮಂಡಳಿಗೆ ಕೊಟ್ಟಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...