ಚೆನ್ನೈ: 22 ವರ್ಷದ ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯೋಗ ಶಿಕ್ಷಕನನ್ನು ಬಂಧಿಸಲಾಗಿದೆ. ಸಂತ್ರಸ್ತೆ ಆರೋಪಿ ಬಳಿ ಯೋಗ ಕಲಿಯುತ್ತಿದ್ದಳು, ಯೋಗರಾಜ್ ಅಲಿಯಾಸ್ ಪೂವೇಂದ್ರನ್ ಚಿದಂಬರಂ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಕೋಡಂಬಕ್ಕಂ ನಿವಾಸಿಯಾಗಿರುವ 45 ವರ್ಷದ ಯೋಗರಾಜ್ ನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಯುವತಿ ಮೇಲೆ ಅನೇಕ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದ ಆರೋಪಿ ಕೃತ್ಯವನ್ನು ರೆಕಾರ್ಡ್ ಮಾಡಿ, ವಿಡಿಯೋಗಳನ್ನು ಅಂತರ್ಜಾಲದಲ್ಲಿ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಮಾಂಬಲಂನ ಮಹಿಳಾ ಪೋಲೀಸರ ಪ್ರಕಾರ, ಈ ವರ್ಷ ಏಪ್ರಿಲ್ ನಲ್ಲಿ ಮೊದಲ ಬಾರಿಗೆ ಅತ್ಯಾಚಾರ ಎಸಗಿದ್ದಾನೆ. ಮೊದಲಿಗೆ ಕೂಲ್ ಡ್ರಿಂಕ್ ನಲ್ಲಿ ಅಮಲು ಪದಾರ್ಥ ಬೆರೆಸಿಕೊಟ್ಟಿದ್ದ ಎಂದು ಯುವತಿ ಆರೋಪಿಸಿದ್ದು, ಆ ಬಳಿಕ ಆತ ತನ್ನ ಮೇಲೆ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಅವನಿಗೆ ಸಹಕರಿಸದಿದ್ದರೆ ಆತ ವಿಡಿಯೋಗಳನ್ನು ಲೀಕ್ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದ. ಏಪ್ರಿಲ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸುವ ನೆಪದಲ್ಲಿ ಆರೋಪಿ ತನ್ನ ಮನೆಗೆ ಯುವತಿಯನ್ನು ಆಹ್ವಾನಿಸಿದ್ದ. ಪಾನಿಯ ಕುಡಿಸಿ ಅವಳ ಮೇಲೆ ಅತ್ಯಾಚಾರ ಎಸಗಿದ್ದ. ತನ್ನ ಮೊಬೈಲ್ ಫೋನ್‌ನಲ್ಲಿ ಆರೋಪಿಯು ಇತರ ಹಲವು ಮಹಿಳೆಯರ ಅಶ್ಲೀಲ ವೀಡಿಯೊಗಳನ್ನು ಹೊಂದಿದ್ದಾನೆ ಎಂದು ದೂರು ನೀಡಿರುವ ಯುವತಿ ಆರೋಪಿಸಿದ್ದಾಳೆ.
ಯೋಗರಾಜ್ ಬಂಧನದ ಬಳಿಕ ಪೊಲೀಸರು ಆರೋಪಿಯ ಲ್ಯಾಪ್ ಟಾಪ್ ಮತ್ತು ಸೆಲ್ ಫೋನ್ ವಶಪಡಿಸಿಕೊಂಡಿದ್ದಾರೆ. ವಿಚಾರಣೆಯ ನಂತರ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.