
ಬೆಳಗ್ಗೆ 8:15ರ ಸುಮಾರಿಗೆ ನನಗೆ ಮರದ ಕೊಂಬೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಕರೆ ಬಂತು. ಕೂಡಲೇ ನಮ್ಮ ತಂಡದ ಜೊತೆಯಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದೆ. ಸೂಕ್ಷ್ಮವಾಗಿ ಅವಲೋಕಿಸಿದಾಗ ಆತ ಸತ್ತಿಲ್ಲ ಬದಲಾಗಿ ಪ್ರಜ್ಞೆ ತಪ್ಪಿದ್ದಾನೆ ಎಂದು ತಿಳಿಯಿತು ಎಂದು ರಾಜೇಶ್ವರಿ ಹೇಳಿದ್ರು.
ರಕ್ಷಿಸಲ್ಪಟ್ಟ ವ್ಯಕ್ತಿಯನ್ನು 28 ವರ್ಷದ ಆರ್. ಉದಯಕುಮಾರ್ ಎಂದು ಗುರುತಿಸಲಾಗಿದೆ. ಈತ ಸ್ಮಶಾನದಲ್ಲಿ ಕೆಲಸ ಮಾಡುವವನಾಗಿದ್ದಾನೆ. ಈತನ ಗೆಳೆಯ ಸಹಾಯವಾಣಿಗೆ ಕರೆ ಮಾಡಿ ಉದಯ್ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದನು. ಕೂಡಲೇ ಸ್ಥಳಕ್ಕೆ ಬಂದ ರಾಜೇಶ್ವರಿ & ಟೀಂ ಉದಯ್ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದೆ.
ತಡರಾತ್ರಿ ಇಬ್ಬರೂ ಚೆನ್ನಾಗಿ ಮದ್ಯಪಾನ ಮಾಡಿದ್ದರು. ಉದಯ್ಕುಮಾರ್ ಉಸಿರಾಡುತ್ತಿದ್ದಾನೆ ಎಂಬುದನ್ನೂ ಸ್ನೇಹಿತ ಗಮನಿಸಿರಲಿಲ್ಲ. ನಾನು ಆತನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದೆ. ಅಲ್ಲದೇ ಆತನನ್ನು ಗಸ್ತು ವಾಹನದ ಮೂಲಕವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯೋಚಿಸಿದ್ದೆ ಎಂದು ರಾಜೇಶ್ವರಿ ಹೇಳಿದ್ರು.
ಆಟೋ ರಿಕ್ಷಾವನ್ನು ನಿಲ್ಲಿಸಿದ ರಾಜೇಶ್ವರಿ ಉದಯ್ ಸ್ನೇಹಿತನ ಜೊತೆಯಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ವಿಡಿಯೋದಲ್ಲಿ ರಾಜೇಶ್ವರಿ ಹೇಗಾದರೂ ಮಾಡಿ ಆತನನ್ನು ಬಚಾವ್ ಮಾಡಿ. ಆತನ ಕೈ ಬಿಡಬೇಡಿ ಎಂದು ಹೇಳುತ್ತಿರೋದನ್ನು ಕೇಳಬಹುದಾಗಿದೆ.
ಸದ್ಯ ಉದಯ್ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳಾ ಪೊಲೀಸ್ ಅಧಿಕಾರಿಯ ಕರ್ತವ್ಯನಿಷ್ಠೆ ವ್ಯಾಪಕ ಮೆಚ್ಚುಗೆ ಗಿಟ್ಟಿಸಿಕೊಳ್ತಿದೆ.