ಚೆನ್ನೈ: ಕೊರೋನಾ ಲಸಿಕೆ ಸೈಡ್ ಎಫೆಕ್ಟ್ ನಿಂದಾಗಿ 5 ಕೋಟಿ ರೂ. ಪರಿಹಾರ ನೀಡಬೇಕೆಂದು ಪರೀಕ್ಷಾರ್ಥಿಯೊಬ್ಬರು ಬೇಡಿಕೆ ಇಟ್ಟಿದ್ದಾರೆ.
ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆ ನನ್ನ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ಪರೀಕ್ಷಾರ್ಥಿಯೊಬ್ಬ ಆಪಾದಿಸಿದ್ದಾರೆ. ಭಾರತದಲ್ಲಿ ಲಸಿಕೆ ಪ್ರಯೋಗ ಮತ್ತು ಅಭಿವೃದ್ಧಿಪಡಿಸುವ ಹಕ್ಕು ಪಡೆದಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಸಂಸ್ಥೆಗೆ 5 ಕೋಟಿ ರೂ ಪರಿಹಾರಕ್ಕಾಗಿ ನೋಟಿಸ್ ಜಾರಿ ಮಾಡಿದ್ದು, ಸ್ಪಂದಿಸದಿದ್ದರೆ ಕೋರ್ಟ್ ಮೊರೆ ಹೋಗುವುದಾಗಿ ಸಂತ್ರಸ್ಥನ ಪರ ವಕೀಲ ರಾಜಾರಾಂ ಪ್ರಸಾದ್ ಹೇಳಿದ್ದಾರೆ
ಪ್ರಯೋಗದ ಕಾರಣಕ್ಕೆ ಲಸಿಕೆ ಪಡೆದ ನಂತರದಲ್ಲಿ ವ್ಯಕ್ತಿಗೆ ನರಕೋಶದ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣದಿಂದ ಸೀರಂ ಸಂಸ್ಥೆ ಮತ್ತು ವೈದ್ಯಕೀಯ ಸಂಶೋಧನಾ ಮಂಡಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.