ಆ್ಯಪಲ್ ಕಂಪನಿಯ ಐಫೋನ್ ಇರಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿ ಬಹಳ ದಿನಗಳಾಗಿವೆ. ಅಷ್ಟೇ ದೊಡ್ಡ ಪ್ರತಿಷ್ಠೆ ಐಫೋನ್ಗಳಿಗೆ ಬ್ಯಾಕ್ ಕೇಸ್ ಹಾಕಿಸುವುದು.
ಕಂಪನಿಯದ್ದೇ ಒರಿಜಿನಲ್ ಕೇಸ್ನ ಬೆಲೆ 4500 ರೂ. ನಿಂದ ಆರಂಭವಾಗುತ್ತದೆ. ಆದರೆ ಇದರ ನಕಲಿ ರೂಪ ಕೆಲವೆಡೆ ಸಿಗುತ್ತದೆ. ಅದರ ಬೆಲೆಯೇನು ಕಡಿಮೆ ಇಲ್ಲ, ಸುಮಾರು 500 ರೂ.
ಇಂಥದ್ದೇ ನಕಲಿ ಬ್ಯಾಕ್ ಕೇಸ್ಗಳನ್ನು ಮಾರುತ್ತಿದ್ದ ಚೆನ್ನೈನ ಅಮಿನ್ಜಿಕರೈನ ಇಬ್ಬರು ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯದಲ್ಲೇ ಬಿಡುಗಡೆಯಾಗಲಿರುವ ಐ ಫೋನ್ 13 ನಲ್ಲಿ ಇರಲಿದೆಯಾ ಈ ವ್ಯವಸ್ಥೆ…?
ಇವರ ಬಳಿಯಿಂದ 350 ನಕಲಿ ಕೇಸ್ ಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೆಲ್ಫೋನ್ ಅಂಗಡಿ ಇರಿಸಿಕೊಂಡು, ಸ್ಮಾರ್ಟ್ಫೋನ್ಗಳ ಜತೆಗೆ ನಕಲಿ ಕೇಸ್ಗಳ ದಂಧೆಯನ್ನು ಕೂಡ ಇವರು ನಡೆಸುತ್ತಿದ್ದರು ಎನ್ನಲಾಗಿದೆ. ಹಕ್ಕುಸ್ವಾಮ್ಯ ಉಲ್ಲಂಘನೆ ಕಾಯಿದೆ (ಕಾಪಿರೈಟ್ಸ್ ಕಾಯಿದೆ) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಕಲಿ ಕೇಸ್ಗಳ ಹಾವಳಿಯು ಜೋರಾಗಿ ನಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಐಫೋನ್ ಕಂಪನಿಯು ಮುಂಬೈ ಮೂಲದ ಕಂಪನಿಯೊಂದರ ಅಧಿಕಾರಿಯನ್ನು ನಕಲಿ ಮಾರಾಟಗಾರರ ಮೇಲೆ ನಿಗಾ ಇರಿಸಲು ನೇಮಿಸಿಕೊಂಡಿದೆ.