ಚೆನ್ನೈ: ಪಿ.ಹೆಚ್.ಡಿ. ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಸೇರಿ 43 ವರ್ಷದ ವ್ಯಕ್ತಿಯನ್ನು ಹಗಲಿನಲ್ಲಿ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಆರೋಪಿಗಳನ್ನು ಕಳವಕ್ಕಂನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಭೌತಶಾಸ್ತ್ರ ಸಂಶೋಧನಾ ವಿದ್ಯಾರ್ಥಿನಿ ಜೆ. ದೇಸಪ್ರಿಯಾ(26) ಮತ್ತು ಆಕೆಯ ಗೆಳೆಯ ಕಟ್ಟನ್ ಕುಲತ್ತೂರ್ ನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿ ಎಸ್. ಅರುಣ್ ಪಾಂಡಿಯನ್(27) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಇಬ್ಬರು ಕತ್ತನ್ ಕುಳತ್ತೂರ್‌ನಲ್ಲಿರುವ ವಿಶ್ವವಿದ್ಯಾಲಯದ ಕೆಲಸಗಾರ ಕೆ. ಸೆಂಥಿಲ್(43) ಎಂಬಾತನನ್ನು ಕೊಂದಿದ್ದಾರೆ. ದೇಸಪ್ರಿಯಾಳನ್ನು ಮದುವೆಯಾಗಬೇಕೆಂಬ ಸೆಂಥಿಲ್ ನಿರಂತರವಾಗಿ ಪೀಡಿಸಿದ್ದೇ ಘಟನೆಗೆ ಕಾರಣವೆನ್ನಲಾಗಿದೆ.
ಸೆಂಥಿಲ್ ಮತ್ತು ದೇಸಪ್ರಿಯಾ ಅವರು ಕಟ್ಟನ್ ಕುಳತ್ತೂರ್ ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಸಮಯದಿಂದ ಪರಸ್ಪರ ತಿಳಿದಿದ್ದರು. ಅವನು ಮದುವೆಯಾಗಿದ್ದಾನೆಂದು ತಿಳಿದ ನಂತರ ಅವಳು ಅವನೊಂದಿಗಿನ ಸಂಬಂಧ ಕಡಿತಗೊಳಿಸಿದಳು. ಆದರೂ, ಸೆಂಥಿಲ್ ಆಕೆಯನ್ನು ಹಿಂಬಾಲಿಸುತ್ತಲೇ ಇದ್ದ. ಮದುವೆಯಾಗಲು ಪದೇ ಪದೇ ಒತ್ತಾಯಿಸಿದ್ದ. ಸುಮಾರು 7 ವರ್ಷಗಳಿಂದ ಮಕ್ಕಳಿಲ್ಲದ ಕಾರಣ ಆಕೆಯೊಂದಿಗೆ ವಿವಾಹವಾಗಲು ಬಯಸಿದ್ದ ಆತ ಈ ಬಗ್ಗೆ ತನ್ನ ಹೆಂಡತಿಗೆ ತಿಳಿಸಿ ಬಲವಂತವಾಗಿ ಮದುವೆಯಾಗುವುದಾಗಿ ಪೀಡಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ದೇಸಪ್ರಿಯಾ ಆತನಿಂದ ದೂರವಾಗಲು ಪ್ರಾರಂಭಿಸಿದಾಗ, ಸೆಂಥಿಲ್ ಅವರು ತಮ್ಮ ಹಳೆಯ ಫೋಟೋಗಳನ್ನು ಆನ್ ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಹೇಳಿ ಬೆದರಿಕೆ ಹಾಕಿದ್ದಾನೆ. ನಂತರ ಅರುಣ್ ಗೆ ಆಕೆ ವಿಷಯ ತಿಳಿಸಿದ್ದಾಳೆ. ಇದರ ಬೆನ್ನಲ್ಲೇ ಇಬ್ಬರೂ ಸೆಂಥಿಲ್ ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.
ಗುರುವಾರ ಮಧ್ಯಾಹ್ನ ದೇಸಪ್ರಿಯಾ ತನ್ನ ಕಾಲೇಜಿನಲ್ಲಿ ಭೇಟಿಯಾಗುವಂತೆ ಸೆಂಥಿಲ್ ಗೆ ಹೇಳಿದ್ದಳು. ಅವರು ಮಾತುಕತೆ ನಡೆಸುತ್ತಿರುವಾಗ ಅಲ್ಲಿಗೆ ಅರುಣ್ ಕೂಡ ಬಂದಿದ್ದಾನೆ. ವಾಗ್ವಾದ ಭುಗಿಲೆದ್ದ ನಂತರ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಲು ಯತ್ನಿಸಿದ ಸೆಂಥಿಲ್ ನ ಬೆನ್ನತ್ತಿದ ದೇಸಪ್ರಿಯಾ ಮತ್ತು ಅರುಣ್ ಎರಡು ಚಾಕು ಬಳಸಿ ಪದೇ ಪದೇ ಚುಚ್ಚಿ ದಾಳಿ ಮಾಡಿದ್ದಾರೆ, ಇದರಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲಿದ್ದವರು ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.