
ನಗರದಲ್ಲಿ ನಿರಂತರ ಮಳೆಯಿಂದಾಗಿ ಆಂಜಿನೇಯರ್ ದೇವಸ್ಥಾನದಲ್ಲಿ ಹಲವಾರು ವಿವಾಹಗಳು ವಿಳಂಬಗೊಂಡವು. ಆದರೆ ಹವಾಮಾನ ವೈಪರೀತ್ಯದ ನಡುವೆಯೂ ತಿಂಗಳ ಹಿಂದೆಯೇ ಮದುವೆ ನಿಗದಿಯಾಗಿದ್ದ ಕೆಲ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲು ದೇವಸ್ಥಾನಕ್ಕೆ ಬಂದಿದ್ದರು.
ಚೆನ್ನೈನ ಪುಲಿಯಾಂತೋಪ್ ಪ್ರದೇಶದ ಜಲಾವೃತ ರಸ್ತೆಯಲ್ಲಿ ಛತ್ರಿಯ ಕೆಳಗೆ ಪರಸ್ಪರ ಕೈ ಹಿಡಿದುಕೊಂಡು ನಡೆದ ಜೋಡಿ ದೇವಸ್ಥಾನ ತಲುಪಿದ್ದರು.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಮಳೆ ಭಾನುವಾರದವರೆಗೆ ಮುಂದುವರಿಯುತ್ತದೆ ಎಂದು ಮುನ್ಸೂಚನೆ ನೀಡಿದೆ.
ನವೆಂಬರ್ 11 ಶುಕ್ರವಾರದಂದು ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳ ಬಹು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಚೆನ್ನೈ, ತಿರುವಳ್ಳೂರ್, ವಿಲ್ಲುಪುರಂ, ಕಾಂಚೀಪುರಂ ಮತ್ತು ಹೆಚ್ಚಿನ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.