ಚೆನ್ನೈ: ಮಾದಕ ದ್ರವ್ಯ ದಂಧೆಕೋರರ ವಿರುದ್ಧದ ಮತ್ತೊಂದು ಪ್ರಮುಖ ಕಾರ್ಯಾಚರಣೆಯಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕ್ಯಾಬಿನ್ ಬ್ಯಾಗೇಜ್ ನಲ್ಲಿ ಬಚ್ಚಿಟ್ಟಿದ್ದ 111.41 ಕೋಟಿ ರೂಪಾಯಿ ಮೌಲ್ಯದ 10 ಕೆಜಿಗೂ ಹೆಚ್ಚು ಮಾದಕ ದ್ರವ್ಯಗಳನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಅಂಗೋಲಾದ ಮಹಿಳೆ ಸೇರಿದಂತೆ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್ ಇಲಾಖೆ ಬಂಧಿಸಿದೆ. ಆಗಸ್ಟ್ 11 ರಂದು ನಡೆದ ಮೊದಲ ಘಟನೆಯಲ್ಲಿ, ಸುಳಿವು ಆಧರಿಸಿ ಅಡಿಸ್ ಅಬಾಬಾದಿಂದ ಆಗಮಿಸಿದ ಪ್ರಯಾಣಿಕರ ಕ್ಯಾಬಿನ್ ಸಾಮಾನು, ಬೂಟುಗಳು ಮತ್ತು ಚಪ್ಪಲಿಗಳಲ್ಲಿ ಅಡಗಿಸಿಟ್ಟಿದ್ದ ಕೊಕೇನ್ ಮತ್ತು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ 100 ಕೋಟಿ ಮೌಲ್ಯದ 9.59 ಕೆಜಿ ತೂಗುತ್ತದೆ ಎಂದು ಕಸ್ಟಮ್ಸ್ ಪ್ರಧಾನ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಆಗಸ್ಟ್ 9ರಂದು ನಡೆದ ಎರಡನೇ ಘಟನೆಯಲ್ಲಿ ಅಂಗೋಲಾ ಪ್ರಜೆಯ ಬ್ಯಾಗ್ ನಲ್ಲಿ 1.18 ಕೆಜಿ ತೂಕದ ಕೊಕೇನ್ ಪತ್ತೆಯಾಗಿದ್ದು, ಇದರ ಮೌಲ್ಯ 11.41 ಕೋಟಿ ರೂ.ಆಗಿದೆ.