alex Certify ಬರೋಬ್ಬರಿ 109 ದಿನ ವೆಂಟಿಲೇಟರ್ ನಲ್ಲಿದ್ದು ಬದುಕುಳಿದ ಕೋವಿಡ್ ರೋಗಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 109 ದಿನ ವೆಂಟಿಲೇಟರ್ ನಲ್ಲಿದ್ದು ಬದುಕುಳಿದ ಕೋವಿಡ್ ರೋಗಿ..!

ಕೋವಿಡ್​ನಿಂದಾಗಿ ಸಂಪೂರ್ಣವಾಗಿ ಶ್ವಾಸಕೋಶಕ್ಕೆ ಹಾನಿ ಮಾಡಿಕೊಂಡಿದ್ದ ಕೃತಕ ಶ್ವಾಸಕೋಶದ ಸಹಾಯದಿಂದ 62 ದಿನಗಳ ಕಾಲ ಉಸಿರಾಡುವ ಮೂಲಕ ಚೇತರಿಸಿಕೊಂಡಿದ್ದಾರೆ. ಶ್ವಾಸಕೋಶ ಕಸಿ ಮಾಡದೇ ಇಸಿಎಂಒ ಮೂಲಕವೇ ದೀರ್ಘಕಾಲ ಉಸಿರಾಡದ ರೋಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 56 ವರ್ಷದ ಮೊಹಮ್ಮದ್​ ಮುದ್ದಿಜಾಗೆ ಮರುಜೀವ ಸಿಕ್ಕಂತಾಗಿದೆ. ಏಪ್ರಿಲ್​ ಅಂತ್ಯದ ವೇಳೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಮುದ್ದಿಜಾರ ಶ್ವಾಸಕೋಶ ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಶ್ವಾಸಕೋಶ ಸಂಪೂರ್ಣ ಹಾನಿಯಾದ ಬಳಿಕ ದಿನಕ್ಕೆ 10 ಲೀಟರ್​​​ ಆಮ್ಲಜನಕದ ಅಗತ್ಯವಿದ್ದ ಹಿನ್ನೆಲೆ ವೈದ್ಯರು ಮುದ್ದಿಜಾರನ್ನು ಇಸಿಎಂಓದಲ್ಲಿ ಇರಿಸುವ ನಿರ್ಧಾರಕ್ಕೆ ಬಂದರು.

ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ 56 ವರ್ಷದ ಮೊಹಮದ್ ಮುದ್ಧಿಜಾ ಅವರಿಗೆ ಇದು ಹೊಸ ಜೀವನ. ಏಪ್ರಿಲ್ ಅಂತ್ಯದಲ್ಲಿ ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ ನಂತರ ಅವರ ಶ್ವಾಸಕೋಶಗಳು ಸಂಪೂರ್ಣ ಹಾನಿಗೊಳಗಾದವು. ನಿಮಿಷಕ್ಕೆ 10 ಲೀಟರ್ ಆಮ್ಲಜನಕದ ಅಗತ್ಯವಿದ್ದ ಆತನ ಶ್ವಾಸಕೋಶದ ಸ್ಥಿತಿ ಹದಗೆಟ್ಟ ನಂತರ ವೈದ್ಯರು ಆತನನ್ನು ಇಸಿಎಂಒಗೆ ಸೇರಿಸಿದರು.

ಉದ್ಯಮಿಯಾಗಿದ್ದ ಮುದ್ದಿಜಾಗೆ ಶ್ವಾಸಕೋಶದ ಕಸಿ ಮಾಡಲು ನಾಲ್ಕು ವಾರಗಳ ಕಾಲ ಕಾದರು. ಆದರೆ ಆ ಸಮಯದಲ್ಲಿ ಕೊರೊನಾ 2ನೆ ಅಲೆ ಭೀಕರವಾಗಿದ್ದ ಹಿನ್ನೆಲೆಯಲ್ಲಿ ಅಂಗದಾನ ಮಾಡುವವರು ಸಿಗಲಿಲ್ಲ. ಆದರೆ ವೈದ್ಯರು ಧೈರ್ಯ ಕಳೆದುಕೊಳ್ಳಲಿಲ್ಲ. ಮುದ್ದಿಜಾರನ್ನು ಐಸಿಎಂಒದಲ್ಲೇ ಇರಿಸಲಾಯ್ತು. ಬರೋಬ್ಬರಿ 9 ವಾರಗಳ ಬಳಿಕ ಮುದ್ದಿಜಾರ ಶ್ವಾಸಕೋಶದ ಆರೋಗ್ಯ ಸುಧಾರಿಸಿದೆ.

109 ದಿನಗಳ ಕಾಲ ವೆಂಟಿಲೇಟರ್​ನಲ್ಲೇ ಉಸಿರಾಡಿದ್ದ ಮುದ್ದಿಜಾ ಈಗ ವ್ಹೀಲ್​ಚೇರ್​ನಲ್ಲಿದ್ದಾರೆ. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಿದ್ಧತೆಯಲ್ಲಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಮುದ್ದಿಜಾ, ಇದು ನನಗೆ 2ನೇ ಜನ್ಮವಾಗಿದೆ. ವೈದ್ಯರ ಸೂಚನೆಯಂತೆ ಎಲ್ಲಾ ಮಾಡಿದ್ದೇನೆ. ನನ್ನ ಪ್ರಯತ್ನಗಳನ್ನು ನಾನು ದೇವರ ಕೈಯಲ್ಲಿ ಇಟ್ಟಿದ್ದೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...