ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ನೋರ್ ಪೊಲೀಸ್ ಇನ್ಸ್ಪೆಕ್ಟರ್ ಸಿ. ಪುಗಳೇಂದಿ ಅವರನ್ನು ಸೋಮವಾರ ಬಂಧಿಸಲಾಗಿದೆ.
ಅಮಾನತ್ ಆಗಿರುವ ಪೊಲೀಸ್ ಅಧಿಕಾರಿ ಬಾಲಕಿಯನ್ನು ವೇಶ್ಯಾವಾಟಿಕೆ ತಳ್ಳಲಾಗಿದೆ ಎಂದು ತಿಳಿದಿದ್ದರೂ ಕೂಡ ಗ್ರಾಹಕನಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಚೆನ್ನೈ ವುಮನ್ ಅಂಡ್ ಚಿಲ್ಡ್ರೆನ್ ಅಪರಾಧ ನಿಯಂತ್ರಣ ಘಟಕದ ಪೊಲೀಸರು, ಪ್ರಥಮ ಮಾಹಿತಿ ಸಾಕ್ಷ್ಯಾಧಾರಗಳಿವೆ ಎಂದು ಮನವರಿಕೆಯಾದ ನಂತರ ಪುಗಳೇಂದಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬಿಜೆಪಿ ಕಾರ್ಯಕರ್ತ ರಾಜೇಂದ್ರನ್ ಪೊಲೀಸರ ಮೇಲೆ ಗಂಭೀರ ಆರೋಪಮಾಡಿದ್ದನಲ್ಲದೇ ಬಾಲಕಿ ಮೇಲೆ ದೌರ್ಜನ್ಯ ನಡೆಸಿರುವುದನ್ನು ಬಹಿರಂಗಪಡಿಸಿದ್ದ. ಪೊಲೀಸರ ಮಾಹಿತಿಯ ಪ್ರಕಾರ, ವಿಚಾರಣೆ ಸಂದರ್ಭದಲ್ಲಿ ರಾಜೇಂದ್ರನ್ ಮಾಹಿತಿ ನೀಡಿ, ಸೆಪ್ಟಂಬರ್ ಮತ್ತು ನಂತರದಲ್ಲಿ ಹಲವಾರು ಬಾರಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಇನ್ಸ್ ಪೆಕ್ಟರ್ ಪುಗಳೇಂದಿ ಕೂಡ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾನೆ.
ಅಂದ ಹಾಗೇ, ಐದನೇ ತರಗತಿಯವರೆಗೆ ಓದಿದ ನಂತರ ಶಾಲೆಯಿಂದ ಹೊರಗುಳಿದ ಬಾಲಕಿ ಒಂಟಿಯಾಗಿದ್ದ ತಾಯಿಗೆ ಸಹಾಯ ಮಾಡಿಕೊಂಡಿದ್ದಳು. ಪ್ರೌಢಾವಸ್ಥೆ ತಲುಪಿದ ನಂತರ ತಾನಿರುವ ಪ್ರದೇಶವು ಆಕೆಗೆ ಅಸುರಕ್ಷಿತ ಎಂದು ಭಾವಿಸಿದ ತಾಯಿ ಉತ್ತರ ಚೆನ್ನೈನಲ್ಲಿರುವ ತನ್ನ 22 ವರ್ಷದ ಸೋದರಸೊಸೆ ಮನೆಗೆ ಕಳುಹಿಸಿದ್ದರು.
ಸೋದರ ಸೊಸೆ ಆಕೆಯ ಗೆಳೆಯ ಮತ್ತು ಇತರರು ಸೇರಿಕೊಂಡು ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾರೆ. ಪ್ರತಿದಿನ 8 ರಿಂದ 10 ಮಂದಿ ಆಕೆಯನ್ನು ಬಳಸಿಕೊಂಡಿದ್ದಾರೆ. ಸೋದರ ಸೊಸೆಯ ಮನೆಯಿಂದ ತಾಯಿಯ ಮನೆಗೆ ಹೋಗಲು ಬಾಲಕಿ ನಿರಾಕರಿಸಿದಾಗ ಅನುಮಾನಗೊಂಡ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ನವೆಂಬರ್ 11 ರಂದು ಚೆನ್ನೈ ಪೊಲೀಸರು ಆರು ಮಹಿಳೆಯರು ಸೇರಿದಂತೆ 8 ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಾಲಕಿಯನ್ನು ಹಲವಾರು ತಿಂಗಳುಗಳ ಕಾಲ ವೇಶ್ಯವಾಟಿಕೆಗೆ ಒತ್ತಾಯಿಸಿರುವುದು ಗೊತ್ತಾಗಿದೆ.
ಅಲ್ಲದೆ, ಬಿಜೆಪಿ ಕಾರ್ಯಕರ್ತ ರಾಜೇಂದ್ರನ್ ಸೇರಿದಂತೆ ಇನ್ನೂ 7 ಜನರನ್ನು ಪೊಲೀಸರು ಬಂಧಿಸಿದ್ದರು, ಅವರು ಒತ್ತಾಯದಿಂದ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಬಳಿಕ ಪುಗಳೇಂದಿ ದೌರ್ಜನ್ಯವೆಸಗಿರುವ ಬಗ್ಗೆ ರಾಜೇಂದ್ರನ್ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಆಧರಿಸಿ ಪುಗಳೇಂದಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಹೇಳಲಾಗಿದೆ.