
ಚೆನ್ನೈ: ಚಲಿಸುತ್ತಿದ್ದ ರೈಲಿನ ಮುಂದೆ ಕಾಲೇಜ್ ವಿದ್ಯಾರ್ಥಿನಿ ತಳ್ಳಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೃತ್ಯ ಎಸಗಿದ ಬಳಿಕ ಆರೋಪಿ ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ದಾನೆ.
ಸತ್ಯಾ ಎಂದು ಗುರುತಿಸಲಾಗಿರುವ ವಿದ್ಯಾರ್ಥಿನಿ ಖಾಸಗಿ ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಓದುತ್ತಿದ್ದಳು. ಸಂತ್ರಸ್ತೆಯ ಮೃತ ದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಆರೋಪಿ ಸತೀಶ್, ಸತ್ಯಾಳನ್ನು ಹಿಂಬಾಲಿಸುತ್ತಿದ್ದನೆಂದು ವರದಿಯಾಗಿದೆ.
ಸೇಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ಅವರ ನಡುವೆ ಜಗಳ ಆರಂಭವಾಗಿ ಅವಳೊಂದಿಗೆ ಮಾತನಾಡಲು ನಿಲ್ಲಿಸಿದ್ದ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೋಪದ ಭರದಲ್ಲಿ, ಆರೋಪಿ ಸತ್ಯಾಳನ್ನು ಚಲಿಸುವ ರೈಲಿಗೆ ತಳ್ಳಿದ್ದಾನೆ. ಪ್ರಯಾಣಿಕರು ರಕ್ಷಿಸುವಷ್ಟರಲ್ಲಿ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ರೈಲ್ವೇ ಟ್ರ್ಯಾಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಸಂತ್ರಸ್ತೆ ಕಳೆದ ಕೆಲವು ವರ್ಷಗಳಿಂದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ರೈಲ್ವೇ ನಿಲ್ದಾಣದಲ್ಲಿ ಅವರ ನಡುವೆ ವಾಗ್ವಾದ ನಡೆದು. ಅವಳನ್ನು ಸ್ಥಳೀಯ ರೈಲಿಗೆ ತಳ್ಳಿದ್ದಾನೆ. ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ವ್ಯಕ್ತಿ ಪರಾರಿಯಾಗಿದ್ದಾನೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.