ಚೆನ್ನೈ: ಕಳೆದ ವರ್ಷ ಹೃದಯಾಘಾತದಿಂದ ನಿಧನರಾದ ದಿವಂಗತ ನಟ ಮತ್ತು ಪದ್ಮಶ್ರೀ ಪುರಸ್ಕೃತ ವಿವೇಕ್ ಅವರ ಹೆಸರನ್ನು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ರಸ್ತೆಗೆ ಇರಿಸಲಾಗಿದೆ. ಅಲ್ಲದೇ ನಟ ವಾಸವಾಗಿದ್ದ ವಿರುಗಂಬಾಕ್ಕಂನ ರಸ್ತೆಯನ್ನು ಚಿನ್ನ ಕಲೈವಾನರ್ ವಿವೇಕ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ.
ಜಿಸಿಸಿ ಶಿಫಾರಸಿನ ಮೇರೆಗೆ ಪುರಸಭೆ ಆಡಳಿತ ಮತ್ತು ನೀರು ಸರಬರಾಜು ಇಲಾಖೆಯಿಂದ ಈ ಕುರಿತು ಸರ್ಕಾರಿ ಆದೇಶ ಹೊರಡಿಸಲಾಗಿದೆ. ವಾರದ ಹಿಂದೆ, ನಟ ವಿವೇಕ್ ಅವರ ಪತ್ನಿ ಅರುಳ್ಸೆಲ್ವಿ ತಮ್ಮ ಮಕ್ಕಳೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿ ರಸ್ತೆಯ ಹೆಸರನ್ನು ಬದಲಾಯಿಸುವಂತೆ ಮನವಿ ಸಲ್ಲಿಸಿದ್ದರು.
ಹಾಸ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದ ಕಾರಣ ‘ಚಿನ್ನ ಕಲೈವಾನರ್’ ಎಂದು ಅಡ್ಡಹೆಸರು ಇಟ್ಟಿದ್ದರು. ಕಳೆದ ವರ್ಷ, 2021ರಂದು ಕೊನೆಯುಸಿರೆಳೆದರು. ಚಲನಚಿತ್ರ ನಿರ್ಮಾಪಕ ಕೆ. ಬಾಲಚಂದರ್ ಅವರ 1987 ರ ಚಿತ್ರವಾದ ಮನತಿಲ್ ಉರುತಿ ವೆಂಡಮ್ ನಲ್ಲಿ ವೃತ್ತಿ ಬದುಕು ಪ್ರಾರಂಭಿಸಿದ್ದರು.