ಕೋವಿಡ್ ಸಾಂಕ್ರಾಮಿಕದ ನಡುವೆ ಶೈಕ್ಷಣಿಕ ವ್ಯವಸ್ಥೆ ಹಳ್ಳಹಿಡಿದಿದೆ. ಮಕ್ಕಳ ಭವಿಷ್ಯ ಹೇಗೋ ಏನೋ ಎಂಬ ಆತಂಕ ಪೋಷಕರಲ್ಲಿದೆ.
ಈ ನಡುವೆಯೇ ತಮಿಳುನಾಡು ಸ್ಟೇಟ್ ಬೋರ್ಡ್ ಹನ್ನೆರಡನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾಯಿಸಿದ್ದು, ಎಲ್ಲರನ್ನೂ ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗಿದೆ.
ಮೃತನಾಗಿದ್ದಾನೆಂದು ತಿಳಿದ ವ್ಯಕ್ತಿ 24 ವರ್ಷಗಳ ಬಳಿಕ ದಿಢೀರ್ ಪ್ರತ್ಯಕ್ಷ….! ಹೊಸದಾಗಿ ಆಗಬೇಕಿದೆ ನಾಮಕರಣ
ಮೇನಲ್ಲಿ ಸಾಂಕ್ರಾಮಿಕ ಸೋಂಕಿತನಾಗಿದ್ದ 12ನೇ ತರಗತಿಯ ವಿದ್ಯಾರ್ಥಿ ರೂಬೆನ್ ಸ್ಟೀಫನ್ ಜಾನ್ ಶೇ.96ರಷ್ಟು ಅಂಕ ಗಳಿಸಿದ್ದಾನೆ.
ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕ ಪ್ರವೇಶ ಗಳಿಸಿರುವ ಜಾನ್, ಕೋವಿಡ್ ಸೋಂಕಿತನಾಗಿದ್ದಾಗಲೂ ನನಗೆ ತುಂಬಾ ಸಹಾಯ ಮಾಡಿದ್ದಕ್ಕಾಗಿ ನನ್ನ ಶಿಕ್ಷಕರಿಗೆ ಧನ್ಯವಾದಗಳು. ಉತ್ತಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೇರಬೇಕೆಂಬುದು ನನ್ನ ಮುಂದಿನ ಯೋಜನೆ. ಅರ್ಟಿಪಿಶಿಯಲ್ ಇಂಟಲಿಜೆನ್ಸ್ ವಿಷಯ ಅಧ್ಯಯನ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.