ಚೆನ್ನೈ ಮೂಲದ ಐಟಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ನೂರು ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕೆಲಸಗಾರರ ಬೆಂಬಲ ಮತ್ತು ಸರಿಸಾಟಿ ಇಲ್ಲದ ಪರಿಶ್ರಮಕ್ಕಾಗಿ ತಾನು ಈ ಕೊಡುಗೆಯನ್ನು ನೀಡುತ್ತಿರುವುದಾಗಿ ಹೇಳಿದೆ.
Ideas2IT ಕಂಪನಿಯು ತನ್ನ ನೂರು ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರನ್ನು ಕೊಡುಗೆಯಾಗಿ ನೀಡಿದೆ. 500 ಜನ ಕೆಲಸಗಾರರು ಇರುವ ಈ ಕಂಪನಿಯಲ್ಲಿ ಹತ್ತು ವರ್ಷದಿಂದ ಅವಿರತವಾಗಿ ಶ್ರಮಿಸಿರುವ ನೂರು ಜನರಿಗೆ ಕಾರನ್ನು ಕೊಡುಗೆಯಾಗಿ ನೀಡಲಾಗಿದೆ.
ಕೆಲಸಗಾರರ ಪರಿಶ್ರಮದಿಂದ ಬಂದಿರುವ ಲಾಭದಿಂದ ಈ ಕೊಡುಗೆಯನ್ನು ನೀಡಲಾಗಿದೆ ಎಂದು ಮಾರ್ಕೆಟಿಂಗ್ ಹೆಡ್ ಹರಿ ಸುಬ್ರಮಣ್ಯನ್ ಹಾಗೂ ಕಂಪನಿಯ ಸ್ಥಾಪಕ ಹಾಗೂ ಚೇರ್ಮನ್ ಮುರಳಿ ವಿವೇಕಾನಂದನ್ ತಿಳಿಸಿದ್ದಾರೆ.
ಎಂಟು ವರ್ಷದ ಹಿಂದೆ ಭರವಸೆ ನೀಡಿದಂತೆ ಹತ್ತು ವರ್ಷ ಪರಿಶ್ರಮ ಪಟ್ಟವರಿಗೆ ಕಂಪನಿಯ ಲಾಭದಿಂದ ಕಾರ್ ಗಳನ್ನು ನೀಡಲಾಗಿದೆ.