
ಗದಗ: ಕಿಡಿಗೇದಿಗಳ ಗುಂಪು 6 ವಿದ್ಯಾರ್ಥಿನಿಯರ ಮೇಲೆ ಕೆಮಿಕಲ್ ಬಣ್ಣ ಎರಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೀಶ್ವರ ಪೊಲೀಸರು ಓರ್ವ ಅಪ್ರಾಪ್ತ ಬಲಕನನ್ನು ವಶಕ್ಕೆ ಪಡಿದ್ದಿದ್ದಾರೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.
ಲಕ್ಷ್ಮೀಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದಲ್ಲಿ ಬೆಳಿಗ್ಗೆ ಕಿಡಿಗೇಡಿ ಯುವಕರು ವಿದ್ಯಾರ್ಥಿನಿಯರ ಮೇಲೆ ಕೆಮಿಕಲ್ ಬಣ್ಣ ಎರಚಿ ಹಿಂಸಿಸಿದ್ದರು. ವಿದ್ಯಾರ್ಥಿನಿಯರು ಕೆಮಿಕಲ್ ಬಣ್ಣದಿಂದಾಗಿ ಉಸಿರಾಟದ ತೊಂದರೆ, ಎದೆನೋವಿನಿಂದ ನರಳಾಡುತ್ತಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.