
ಬೆಂಗಳೂರು: ರೈತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಮಾರ್ಗದರ್ಶನ, ಸಲಹೆ, ಪರಿಹಾರ ಕಲ್ಪಿಸಲು ಕೃಷಿ ಇಲಾಖೆಯಿಂದ ಏಕೀಕೃತ ಹೆಲ್ಪ್ಲೈನ್ ಆರಂಭಿಸಲಾಗಿದೆ.
ಇದುವರೆಗೆ 8 ಪ್ರತ್ಯೇಕ ಸಂಖ್ಯೆಗಳು ಇದ್ದವು. ಇವುಗಳ ಬದಲಿಗೆ ಒಂದೇ ಸಹಾಯವಾಣಿ ಸಂಖ್ಯೆ 1800 425 3553 ಆರಂಭಿಸಲಾಗಿದೆ. ಶೇಷಾದ್ರಿ ರಸ್ತೆಯ ಕೃಷಿ ಆಯುಕ್ತಾಲಯದಲ್ಲಿ ನೂತನ ಕರೆ ಕೇಂದ್ರವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಲೋಕಾರ್ಪಣೆ ಮಾಡಿದ್ದಾರೆ.
ರೈತರಿಗೆ ಸುಲಭವಾಗಿ ಮಾಹಿತಿ ದೊರೆಯಲು ಈ ಮಾಹಿತಿ ಮತ್ತು ತಂತ್ರಜ್ಞಾನ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಕೃಷಿ ಇಲಾಖೆ ಮುಂದಾಗಿದೆ. ರೈತರಿಗೆ ಸರ್ಕಾರದ ಯೋಜನೆಯ ದೊರಕಿಸಲು, ಲಾಭ, ಬೆಳೆ ಸಮೀಕ್ಷೆ ಮೊದಲಾದವುಗಳ ಪ್ರಯೋಜನ ಪಡೆಯಬಹುದಾಗಿದೆ.