alex Certify ನೋಡಿದವರ ಬಾಯಲ್ಲಿ ನೀರೂರಿಸುತ್ತೆ ಪಫ್ ಪೇಸ್ಟ್ರಿ ಪಿಜ್ಜಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡಿದವರ ಬಾಯಲ್ಲಿ ನೀರೂರಿಸುತ್ತೆ ಪಫ್ ಪೇಸ್ಟ್ರಿ ಪಿಜ್ಜಾ….!

ಬಹುತೇಕ ಮಂದಿ ಪಿಜ್ಜಾ ಇಷ್ಟಪಟ್ಟು ತಿನ್ನುತ್ತಾರೆ. ಮನೆಯಲ್ಲೂ ಕೂಡ ಕೆಲವರು ಈ ಖಾದ್ಯವನ್ನು ತಯಾರಿಸಿರಬಹುದು. ಆದರೆ, ನೀವು ಎಂದಾದ್ರೂ ಪರಾಟದೊಂದಿಗೆ ಪಿಜ್ಜಾ ಮಾಡುವ ಬಗ್ಗೆ ಯೋಚಿಸಿದ್ದೀರಾ..? ಇಲ್ಲದಿದ್ದಲ್ಲಿ, ಇದೀಗ ಬಾಂಗ್ಲಾದೇಶದ ಬಾಣಸಿಗರೊಬ್ಬರು ವಿಭಿನ್ನ ಶೈಲಿಯ ಪರಾಟ ತಯಾರಿಸಿದ್ದು, ಭಾರಿ ವೈರಲ್ ಆಗಿದೆ.

ಬಾಣಸಿಗ ಶಿಹಾನ್ ಚೌಧರಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಈ ಖಾದ್ಯವನ್ನು ನೋಡಿದ್ರೆ ನೀವು ಕೂಡ ಬಾಯಲ್ಲಿ ನೀರು ಸುರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ..!

ಶಿಹಾನ್, ಪಫ್ ಪೇಸ್ಟ್ರಿ ಪಿಜ್ಜಾ ತಯಾರಿಸುವುದನ್ನು ನೋಡಿದ್ರೆನೇ ಬಾಯಲ್ಲಿ ನೀರೂರುತ್ತದೆ. ತಯಾರಿಸುವ ವಿಧಾನ ತುಂಬಾನೇ ಸಿಂಪಲ್ ಆಗಿದ್ದು, ಸಖತ್ ಟೇಸ್ಟ್ ಇದ್ಯಂತೆ. ಇದನ್ನು ತಯಾರಿಸಲು ಶಿಹಾನ ಎರಡು ಪದರಗಳ ರೆಡಿಮೇಡ್ ಪರಾಟಗಳನ್ನು ತೆಗೆದುಕೊಂಡು ಅದರ ಮೇಲೆ ಟೊಮ್ಯಾಟೋ ಸಾಸ್ ಮತ್ತು ಚೀಸ್ ಗಳನ್ನು ಹಾಕಿದ್ದಾರೆ. ನಂತರ ಅದಕ್ಕೆ ಟರ್ಕಿ ಪೆಪ್ಪೆರೋನಿ ಮತ್ತು ಥಾಯ್ ಚಿಲ್ಲಿ ಪೆಪ್ಪರ್‌ ಗಳನ್ನೂ ಕೂಡ ಹಾಕುತ್ತಾರೆ. ಅದರ ಮೇಲೆ ಇನ್ನೊಂದು ಪರಾಟದಿಂದ ಮುಚ್ಚಿದ್ದಾರೆ. ಅದನ್ನು ಓವೆನ್ ನಲ್ಲಿ ಇಟ್ಟರೆ ಸವಿಯಲು ರುಚಿಯಾದ ಪಫ್ ಪೇಸ್ಟ್ರಿ ಸಿದ್ಧವಾಗುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರ ಬಾಯಲ್ಲಿ ನೀರು ಸುರಿದಿದ್ದಲ್ಲದೆ, ಬೆರಗುಗೊಳಿಸಿದೆ. ವಿಶಿಷ್ಟವಾದ ಪಿಜ್ಜಾ ತಯಾರಿಸುವ ಬಗೆ ನೋಡಿ ಹೀಗೂ ಮಾಡಬಹುದು ಅಂತಾ ಬಳಕೆದಾರರು ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ವ್ಯಕ್ತಪಡಿಸಿದ್ದಾರೆ.

https://youtu.be/DQbxUfrqXfM

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...