![Chef Vikas Khanna Tweets Video Of Air India Plane's "Beautiful" Interiors, Internet Confused](https://c.ndtvimg.com/2023-03/mesfpv4_air-india_625x300_10_March_23.jpg)
ವಿಮಾನದ ಸೌಂದರ್ಯ ಮತ್ತು ಸಿಬ್ಬಂದಿಯ ಸೇವೆಯಿಂದ ಮಂತ್ರಮುಗ್ಧರಾದ ಅವರು ವಿಮಾನದಲ್ಲಿನ ಸೇವೆ ಮತ್ತು ಸೌಕರ್ಯದ ಬಗ್ಗೆ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
“ಬಹುಶಃ ನಾನು ಹಾರಿದ ಅತ್ಯಂತ ಸುಂದರವಾದ ವಿಮಾನಗಳಲ್ಲಿ ಒಂದಾಗಿದೆ. ಹೌದು ಇದು ಏರ್ ಇಂಡಿಯಾ.” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಟಾಟಾ ಒಡೆತನದ ವಿಮಾನಯಾನ ಸಂಸ್ಥೆಯು, “ಇದೊಂದು ಸುಂದರ ನೋಟ, ಮಿಸ್ಟರ್ ಖನ್ನಾ! ನೀವು ಸೇವೆಯಿಂದ ಪ್ರಭಾವಿತರಾಗಿದ್ದೀರಿ ಎಂದು ಕೇಳಲು ನಮಗೆ ಸಂತೋಷವಾಗಿದೆ. ನಿಮ್ಮ ವಿಮಾನಯಾನವನ್ನು ನಾವು ಆರಾಮದಾಯಕವಾಗಿಸಬಹುದು ಎಂದು ತಿಳಿದುಕೊಳ್ಳುವುದು ನಮಗೆ ಅಪಾರ ಸಂತೋಷವನ್ನು ನೀಡುತ್ತದೆ”ಎಂದಿದೆ.
ಖನ್ನಾರ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಇದು ಏರ್ ಇಂಡಿಯಾದ ಭವಿಷ್ಯವಾಗಿದ್ದರೆ, ಲಕ್ಷಾಂತರ ಜನರು ಏರ್ ಇಂಡಿಯಾವನ್ನು ಆಯ್ಕೆ ಮಾಡುತ್ತಾರೆ. ಉಜ್ವಲ ಭವಿಷ್ಯಕ್ಕಾಗಿ ಎದುರುನೋಡಬಹುದು!” ಎಂದು ಅಭಿಪ್ರಾಯ ಹೊರಹಾಕಿದ್ದಾರೆ.