alex Certify ಕೇಟರಿಂಗ್ ಹುಡುಗನಿಂದ ಉದ್ಯಮಿಯಾಗಿ ಬದಲಾದ ಬಡ ಬಾಣಸಿಗ; ಇಲ್ಲಿದೆ ಸ್ಪೂರ್ತಿದಾಯಕ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಟರಿಂಗ್ ಹುಡುಗನಿಂದ ಉದ್ಯಮಿಯಾಗಿ ಬದಲಾದ ಬಡ ಬಾಣಸಿಗ; ಇಲ್ಲಿದೆ ಸ್ಪೂರ್ತಿದಾಯಕ ಕಥೆ

ಕನಸಿನ ಬೆನ್ನೇರಲು ಪ್ರಯತ್ನವನ್ನು ಬಿಡಬಾರದು ಎಂಬ ಮಾತಿದೆ. ಸಣ್ಣ ಮೆಟ್ಟಿಲುಗಳನ್ನು ಹತ್ತಿಯೇ ಸಾಧನೆ ಮಾಡಿದವರು ಅನೇಕರಿದ್ದಾರೆ. ಅವರಲ್ಲಿ ಪ್ರಸಿದ್ಧ ಬಾಣಸಿಗ ಸುರೇಶ್ ಪಿಳ್ಳೈ ಕೂಡ ಒಬ್ಬರು.

ಇವರು ಸಿರಿವಂತಿಕೆಯಿಂದ ಈ ಮಟ್ಟಕ್ಕೇರಿದವರಲ್ಲ. ಬಡತನದಲ್ಲಿ ಹುಟ್ಟಿ ಬೆಳೆದು ಇಂದು ಹೆಮ್ಮರವಾಗಿ ಬೆಳೆದಿದ್ದಾರೆ. ಅವರ ಕಥೆಯು ನಿಮಗೆ ಖಂಡಿತವಾಗಿಯೂ ಸ್ಪೂರ್ತಿಯಾಗುವುದರಲ್ಲಿ ಸಂಶಯವೇ ಇಲ್ಲ.

ಬಾಣಸಿಗ ಪಿಳ್ಳೈ ಅವರು ತಮ್ಮ ಕಥೆಯನ್ನು ಟ್ವಿಟರ್‌ನಲ್ಲಿ ತಮ್ಮ ಹಳೆಯ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರವು ಸಮಾರಂಭವೊಂದರಲ್ಲಿ ಆಹಾರ ಬಡಿಸಲು ನಿಂತ ಸಾಮಾನ್ಯ ಹುಡುಗನನ್ನು ತೋರಿಸುತ್ತದೆ. ಈ 18 ವರ್ಷದ ಕೇಟರಿಂಗ್ ಹುಡುಗ ಆಹಾರವನ್ನು ಬಡಿಸುತ್ತಿದ್ದಾನೆ. ಇದು ಅದೇ ಬಾಣಸಿಗ ಪಿಳ್ಳೈ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

“ನಾನು 6ನೇ ಅಥವಾ 7ನೇ ತರಗತಿಯಲ್ಲಿ ನನ್ನ ಮೊದಲ “ವ್ಯವಹಾರ” ಮಾಡಿದ್ದೇನೆ. ನಮ್ಮ ಮನೆಯಲ್ಲಿ ಒಂದು ದೊಡ್ಡ ಕಂಬಿಳಿ ನಾರಂಗ (ಪೊಮೆಲೊ) ಮರವಿತ್ತು. ಅದು ನಮ್ಮ ಬಾಲ್ಯದ ಪ್ರಮುಖ ಹಣ್ಣು. ನಾನು ಅದನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂದರೆ ಬೆಳಗ್ಗೆ 5 ಗಂಟೆಗೆ ಎದ್ದು ತಿಂಡಿಯ ಸಮಯಕ್ಕೆ ಒಂದೆರಡು ಕಿತ್ತು ತಿನ್ನುತ್ತಿದ್ದೆ. ಶೀಘ್ರದಲ್ಲೇ, ಇದು ನನ್ನ ಮೊದಲ ಪಾಕೆಟ್ ಹಣದ ಮೂಲಕ್ಕೆ ಬೆಳೆಯಿತು. ಇವುಗಳನ್ನು ಕಿತ್ತು ಮಾರುಕಟ್ಟೆಯಲ್ಲಿ ಪ್ರತಿ ಹಣ್ಣಿಗೆ 25 ಪೈಸೆಗೆ ಮಾರಾಟ ಮಾಡುತ್ತಿದ್ದೆ. ಆ ಸಮಯದಲ್ಲಿ ನನ್ನ ಸ್ನೇಹಿತರಿಗೆ ಒಂದು ರೂಪಾಯಿ ಹಣವನ್ನು ತೋರಿಸುವುದರಲ್ಲಿ ನನ್ನ ಹೆಮ್ಮೆಯನ್ನು ನೀವು ಊಹಿಸಬಹುದು ಅಂತಾ ಪಿಳ್ಳೈ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

— suresh pillai (@chef_pillai) May 29, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...