ಇತ್ತೀಚಿನ ದಿನಗಳಲ್ಲಿ ಚೀಸ್ ಬಹಳ ಜನಪ್ರಿಯ ತಿನಿಸುಗಳಲ್ಲಿ ಒಂದಾಗಿದೆ. ಇದೊಂದು ಡೈರಿ ಉತ್ಪನ್ನ. ಹಾಲಿನ ಪ್ರೋಟೀನ್‌ಗಳನ್ನು ಹೆಪ್ಪುಗಟ್ಟಿಸುವ ಮೂಲಕ ಚೀಸ್ ತಯಾರಿಸಲಾಗುತ್ತದೆ. ಕ್ಯಾಲ್ಸಿಯಂ, ಪ್ರೊಟೀನ್, ಫಾಸ್ಫರಸ್, ಸತು, ವಿಟಮಿನ್ ಎ ಮತ್ತು ಬಿ 12 ಚೀಸ್‌ನಲ್ಲಿರುತ್ತದೆ. ಆದಾಗ್ಯೂ ಇದು ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಅನ್ನು ಹೊಂದಿರುತ್ತದೆ.
ಕೆಲವು ಅಧ್ಯಯನಗಳ ಪ್ರಕಾರ ಡೈರಿ ಉತ್ಪನ್ನಗಳೊಂದಿಗೆ ಚೀಸ್ ಸೇವಿಸುವುದರಿಂದ ಬುದ್ಧಿಮಾಂದ್ಯತೆ ಅಥವಾ ಬೌದ್ಧಿಕ ಕುಸಿತದ ಅಪಾಯವನ್ನು ಕಡಿಮೆ ಮಾಡಬಹುದು. ಚೀಸ್‌ನಲ್ಲಿರುವ ಕೆಲವು ಪೋಷಕಾಂಶಗಳೇ ಇದಕ್ಕೆ ಕಾರಣ.
ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಚೀಸ್ ನಮ್ಮ ಆರೋಗ್ಯವನ್ನು ಇತರ ಹಲವು ರೀತಿಯಲ್ಲಿ ಉತ್ತೇಜಿಸಲು ಸಹಾಯ ಮಾಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ – ಚೀಸ್ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಅನ್ನು ಹೊಂದಿರುತ್ತದೆ. ಇದು ಮೂಳೆಗಳ ಆರೋಗ್ಯಕ್ಕೆ ಅವಶ್ಯಕ. ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ ವರ್ಧಕ – ಚೀಸ್‌ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಮತ್ತು ಬಿ 12 ಇದೆ. ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಮುಖ್ಯವಾಗಿದೆ. ವಿಟಮಿನ್ ಎ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಟಮಿನ್ ಬಿ 12 ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ – ಚೀಸ್‌ನಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳಿರುತ್ತವೆ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಒಮೆಗಾ -3 ಕೊಬ್ಬಿನಾಮ್ಲಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ – ಕೆಲವು ವಿಧದ ಚೀಸ್‌ಗಳು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತವೆ. ಇದು ಕರುಳಿನ ಆರೋಗ್ಯಕ್ಕೆ ಅವಶ್ಯಕ. ಜೀರ್ಣಕ್ರಿಯೆಯನ್ನು ಕೂಡ ಇದು ಸುಧಾರಿಸುತ್ತದೆ.