alex Certify ಪದೇ ಪದೇ ಫೇಸ್ಬುಕ್ ಪ್ರೊಫೈಲ್ ನೋಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಫೇಸ್ಬುಕ್ ಪ್ರೊಫೈಲ್ ನೋಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಫೇಸ್ಬುಕ್ ಪ್ರೊಫೈಲ್ ಪೇಜ್ ಆಗಾಗ ನೋಡುವ ಅಭ್ಯಾಸ ನಿಮಗೂ ಇದ್ಯಾ…? ಹಾಗಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಪದೇ ಪದೇ ಫೇಸ್ಬುಕ್ ಪ್ರೊಫೈಲ್ ಪೇಜ್ ನೋಡುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಅತೃಪ್ತಿ ಹಾಗೂ ಅನಾರೋಗ್ಯದಿಂದ ಬಳಲುತ್ತಾರೆ. ಇಂತ ವ್ಯಕ್ತಿಗಳು ನಷ್ಟ ಅನುಭವಿಸುವುದು ಹೆಚ್ಚೆಂದು ಅಧ್ಯಯನವೊಂದು ಹೇಳಿದೆ.

ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದರು. ಎರಡು ವರ್ಷಗಳ ಕಾಲ ಫೇಸ್ಬುಕ್ ಬಳಸುವ ವ್ಯಕ್ತಿಗಳ ಡೇಟಾ ಸಂಗ್ರಹಿಸಿ ಅಧ್ಯಯನ ನಡೆಸಲಾಗಿತ್ತು. ಅಧ್ಯಯನದಲ್ಲಿ ಫೇಸ್ಬುಕ್ ನಲ್ಲಿ ವ್ಯಕ್ತಿಗಳ ಚಟುವಟಿಕೆ, ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ, ಜೀವನ ತೃಪ್ತಿ ಸೇರಿದಂತೆ ಎಲ್ಲ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿತ್ತು.

ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವ ಅದ್ರಲ್ಲೂ ಫೇಸ್ಬುಕ್ ಪ್ರೊಫೈಲ್ ಆಗಾಗ ನೋಡುವ ವ್ಯಕ್ತಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಉಳಿದವರಿಗಿಂತ ಅವರು ಕಡಿಮೆ ಪ್ರಮಾಣದಲ್ಲಿ ಸಂತೋಷವಾಗಿರುತ್ತಾರೆಂದು ಸಂಶೋಧಕರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...