ದೇಶದಲ್ಲಿ ಚಿನ್ನ – ಬೆಳ್ಳಿ ಬೆಲೆ ಗಗನಕ್ಕೇರಿದೆ, ಶುಭ ಸಮಾರಂಭಗಳಿಗೆ ಚಿನ್ನ – ಬೆಳ್ಳಿ ಖರೀದಿಸುವ ಲೆಕ್ಕಾಚಾರ ಹಾಕಿದ್ದವರು ನಿರಾಸೆಗೊಂಡಿದ್ದಾರೆ. ಇದರ ಮಧ್ಯೆಯೂ ಒಂದಷ್ಟು ಮಂದಿ ಖರೀದಿಗೆ ಮುಂದಾಗಿದ್ದಾರೆ. ಪರಿಶುದ್ದ ಬೆಳ್ಳಿ ಪರೀಕ್ಷಿಸುವ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
ನೀವು ಯಾರಿಗಾದ್ರೂ ಬೆಳ್ಳಿ ನಾಣ್ಯ ಕೊಡಬೇಕು ಅಂದುಕೊಂಡಿದ್ರೆ, ಅಥವಾ ನಿಮಗೆ ಬೆಳ್ಳಿ ನಾಣ್ಯಗಳು ಉಡುಗೊರೆಯಾಗಿ ಬಂದಿದ್ರೆ ಅದನ್ನು ಪರೀಕ್ಷಿಸೋದು ಬಹಳ ಸುಲಭ.
ಐಸ್ ಪರೀಕ್ಷೆ : ಬೆಳ್ಳಿ ಎಲ್ಲ ಲೋಹಗಳಿಗಿಂತಲೂ ಹೆಚ್ಚು ಉಷ್ಣ ವಾಹಕತೆಯನ್ನು ಹೊಂದಿದೆ. ನೀವು ಬೆಳ್ಳಿ ನಾಣ್ಯ ಅಥವಾ ಇತರ ವಸ್ತುಗಳನ್ನು ಐಸ್ ಕ್ಯೂಬ್ ಮೇಲಿಟ್ಟರೆ ಅದು ಕರಗಿ ಹೋಗುತ್ತದೆ. ಬಿಸಿ ಮಾಡಿದಾಗ ಯಾವ ರೀತಿ ಕರಗುತ್ತದೆಯೋ ಅದೇ ರೀತಿ ಮೆದುವಾಗುತ್ತದೆ. ರೂಮ್ ಟೆಂಪರೇಚರ್ ನಲ್ಲೇ ಈ ಪರೀಕ್ಷೆ ನಡೆಸಬಹುದು. ಐಸ್ ಕ್ಯೂಬ್ ಮೇಲಿಟ್ಟ ಬೆಳ್ಳಿ ನಾಣ್ಯದ ವೇಳೆ ಐಸ್ ಕರಗಿದ್ರೆ ಅದು ಅಸಲಿ ಎಂದರ್ಥ.
ಶುದ್ಧತೆಯ ಸ್ಟಾಂಪ್ : ಚಿನ್ನದಂತೆ ಬೆಳ್ಳಿ ವಸ್ತುಗಳ ಮೇಲೂ ಹಾಲ್ ಮಾರ್ಕ್ ಕಡ್ಡಾಯ. ಶೇಕಡಾವಾರು ಲೆಕ್ಕದಲ್ಲಿ ಬೆಳ್ಳಿಯ ಪರಿಶುದ್ಧತೆ ಅಳೆಯಲಾಗುತ್ತದೆ. ಅಸಲಿ ಬೆಳ್ಳಿಯಾಗಿದ್ದರೆ ಅದರ ಮೇಲೆ 99.9 ಅಥವಾ ಶೇ.95 ಎಂದು ಬರೆದಿರುತ್ತದೆ.
ಮ್ಯಾಗ್ನೆಟ್ ಪರೀಕ್ಷೆ : ಬೆಳ್ಳಿ ಮ್ಯಾಗ್ನೆಟ್ ಅಲ್ಲ, ಅಸಲಿ ಬೆಳ್ಳಿ ಮ್ಯಾಗ್ನೆಟ್ ನಿಂದ ಆಕರ್ಷಿತವಾಗುವುದಿಲ್ಲ.
ಧ್ವನಿ ಪರೀಕ್ಷೆ : ಬೆಳ್ಳಿ ವಸ್ತುಗಳನ್ನು ಪರಸ್ಪರ ಜೋರಾಗಿ ಸ್ಪರ್ಷಿಸಿದರೆ ಗಂಟೆಯಂತೆ 1-2 ಸೆಕೆಂಡ್ ಗಳ ಕಾಲ ಸದ್ದು ಮಾಡುತ್ತವೆ. 6 ಇಂಚ್ ಎತ್ತರದಿಂದ ಬೆಳ್ಳಿ ನಾಣ್ಯವನ್ನು ಕೆಳಕ್ಕೆ ಹಾಕಿ, ಗಟ್ಟಿಯಾದ ಶಬ್ಧ ಬಂದರೆ ಅದು ಅಸಲಿ, ಕಬ್ಬಿಣದ ವಸ್ತುಗಳಂತಹ ಸದ್ದು ಬಂದರೆ ಅದು ನಕಲಿ.
ರಾಸಾಯನಿಕ ಪರೀಕ್ಷೆ : ಬೆಳ್ಳಿಯ ಪರಿಶುದ್ಧತೆಯನ್ನು ಪರೀಕ್ಷಿಸಲು ನಿಮಗೆ ಆನ್ ಲೈನ್ ನಲ್ಲೂ ಟೆಸ್ಟ್ ಕಿಟ್ ಸಿಗುತ್ತದೆ. ಅಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಿ, ಬೆಳ್ಳಿಯನ್ನು ಪರೀಕ್ಷಿಸಿ. ಆದ್ರೆ ಈ ಪರೀಕ್ಷೆಯಿಂದ ನಿಮ್ಮ ಬೆಳ್ಳಿ ವಸ್ತುಗಳ ಮೇಲೆ ಕಲೆ ಉಂಟಾಗಬಹುದು ಎಚ್ಚರವಿರಲಿ.