
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಜನಪ್ರಿಯ ನಟಿ ಸುಹಾಸಿನಿ ವೈವಾಹಿಕ ಜೀವನಕ್ಕೆ ಕಾಲಿರಿಸಿ ಇಂದಿಗೆ 33 ವರ್ಷಗಳಾಗಿವೆ. ಆಗಸ್ಟ್ 26, 1988ರಂದು ವಿವಾಹವಾದ ಈ ದಂಪತಿಗೆ 29 ವರ್ಷದ ಪುತ್ರ ಇದ್ದಾರೆ.
ಮಣಿರತ್ನಂ ಅವರು ಬಾಲಿವುಡ್ ನಟ ಅನಿಲ್ ಕಪೂರ್ ಹಾಗೂ ಲಕ್ಷೀ ನಟಿಸಿದ 1983ರ ಕನ್ನಡ ಚಿತ್ರ ಪಲ್ಲವಿ ಅನುಪಲ್ಲವಿ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ನಂತರ ಅವರು ತಮಿಳು ಚಿತ್ರಗಳಾದ ಮೌನ ರಾಗಂ, ನಾಯಕ, ಅಗ್ನಿ ನಚ್ಚತಿರಂ, ಇರುವರ್, ತಲಪತಿ, ರೋಜಾ, ಅಲೈಪಾಯುಥೆ, ಕನ್ನತಿಲ್ ಮುತ್ತಮಿತ್ತಲ್ ಹಾಗೂ ಇತರೆ ಸಿನಿಮಾಗಳನ್ನು ನಿರ್ದೇಶಿಸುವ ಮುಖಾಂತರ ಜನಪ್ರಿಯರಾದರು.
ಭಾರತದಲ್ಲಿ ʼಯಾಹೂ ನ್ಯೂಸ್ʼ ವೆಬ್ ಸೈಟ್ ಸ್ಥಗಿತ: ಕಾರಣವೇನು ಗೊತ್ತಾ….?
ಈ ಸುಂದರ ಜೋಡಿಯು ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಹೀಗಾಗಿ ಇವರಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಸಹಾಯಕವಾಯಿತು. ಮಣಿರತ್ನಂ ಅವರು ಸಾಮಾಜಿಕ ಜಾಲತಾಣದಲ್ಲಿ ಇಲ್ಲದಿದ್ದರೂ ಕೂಡ ಸುಹಾಸಿನಿ ಅವರು ಸಕ್ರಿಯರಾಗಿದ್ದಾರೆ. ತನ್ನ ಪತಿ ಜೊತೆಗಿನ ಕೆಲವೊಂದು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮಣಿರತ್ನಂ ಹಾಗೂ ಸುಹಾಸಿನಿ ದಂಪತಿಯ ಅಪರೂಪದ ಫೋಟೋಗಳು ಇಲ್ಲಿವೆ..



https://www.instagram.com/p/CPhVrYkD3TQ/?utm_source=ig_embed&ig_rid=bc41e798-7a8c-460e-a791-d5c7ecfd1675