ಮೇಷ : ಹಿತಶತ್ರುಗಳ ಕಾಟ ನಿಮಗೆ ತಪ್ಪಿದ್ದಲ್ಲ. ಹೀಗಾಗಿ ಇಂತವರನ್ನು ನಿಮ್ಮ ಚತುರ ಬುದ್ಧಿಯಿಂದಲೇ ನೀವು ನಿಭಾಯಿಸಬೇಕು. ಯಾವುದೇ ಕೆಲಸವನ್ನು ಮಾಡುವಾಗ ಅತಿಯಾದ ಒತ್ತಡ ತಂದುಕೊಳ್ಳಬೇಡಿ.
ವೃಷಭ : ಕಚೇರಿ ಕೆಲಸದ ನಿಮಿತ್ತ ಅನಿವಾರ್ಯವಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ವಿದ್ಯಾರ್ಥಿಗಳು ಹೊಸ ವಿಚಾರಗಳನ್ನು ಕಲಿಯಲಿದ್ದಾರೆ. ಪೋಷಕರ ಸಲಹೆಯಿಂದ ಮುಖ್ಯವಾದ ಕೆಲಸವು ಸಾಂಘವಾಗಿ ನೆರವೇರಲಿದೆ.
ಮಿಥುನ : ನೀವು ಅಂದುಕೊಂಡ ಕೆಲಸವನ್ನು ಸುಲಭವಾಗಿ ಮಾಡಿಕೊಳ್ಳುತ್ತೀರಿ. ಮೃದುವಾಗಿ ಮಾತನಾಡುವವರ ಮೇಲೆ ಅತಿಯಾದ ನಂಬಿಕೆ ಬೇಡ. ಬೆಳ್ಳಗಿರೋದೆಲ್ಲ ಹಾಲಲ್ಲ ಎಂಬ ಮಾತು ತಲೆಯಲ್ಲಿ ಇರಲಿ. ದಾಂಪತ್ಯ ಜೀವನದಲ್ಲಿ ಇಷ್ಟವಿಲ್ಲದ ಅನೇಕ ವಿಚಾರಗಳಿಗೆ ಕಷ್ಟಪಟ್ಟು ರಾಜಿಯಾಗಬೇಕಾದ ಅನಿವಾರ್ಯತೆ ಎದುರಾಗಲಿದೆ.
ಕಟಕ : ಉದ್ಯಮದಿಂದ ತುಂಬಾನೆ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಒಳ್ಳೆಯ ಖರೀದಿ ದರ ಸಿಕ್ಕರೆ ಮರು ಯೋಚನೆ ಮಾಡದೇ ಮಾರಿಬಿಡಿ. ಕೆಲಸದಲ್ಲಿ ಕಡಿಮೆ ಅನುಭವ ಹೊಂದಿರುವವರ ಮೇಲೆ ಕೋಪ ಬೇಡ. ತಿದ್ದಿ ಕಲಿಸುವ ಅಭ್ಯಾಸ ರೂಢಿಸಿಕೊಳ್ಳಿ.
ಸಿಂಹ : ಸಹೋದ್ಯೋಗಿಗಳು ಮಾಡುವ ತಪ್ಪುಗಳು ನಿಮ್ಮ ಕೋಪವನ್ನು ಹೆಚ್ಚಿಸಲಿದೆ. ಇದರಿಂದ ನಿಮಗೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ನಿಮಗೆ ಸಂಬಂಧವೇ ಇಲ್ಲದ ವಿಚಾರಗಳಲ್ಲಿ ಮೂಗು ತೂರಿಸಬೇಡಿ. ಮಾತಿನಲ್ಲಿ ಮರಳು ಮಾಡುವವರಿಂದ ಅಂತರ ಕಾಯ್ದುಕೊಳ್ಳಿ. ದಾಂಪತ್ಯ ಜೀವನದಲ್ಲಿ ಶಾಂತಿ ಕಾಪಾಡಿಕೊಳ್ಳಿ.
ಕನ್ಯಾ : ಎಲ್ಲದ್ದಕ್ಕೂ ಕೋಪದಿಂದಲೇ ಪ್ರತಿಕ್ರಿಯೆ ನೀಡುವ ಅಭ್ಯಾಸವನ್ನು ಬಿಟ್ಟುಬಿಡಿ. ತಾಳ್ಮೆಯನ್ನು ರೂಡಿಸಿಕೊಂಡಲ್ಲಿ ನಿಮಗೆ ಅನುಕೂಲ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುತ್ತೀರಿ. ಸತತ ಸೋಲಿನಿಂದ ಕಂಗೆಡಲಿದ್ದೀರಿ.
ತುಲಾ : ಲಾಭ ಸಿಗಲಿದೆ ಎಂಬ ಕಾರಣಕ್ಕೆ ದುರಾಲೋಚನೆ ಬೇಡವೇ ಬೇಡ. ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಇಷ್ಟವಿಲ್ಲದೇ ಇದ್ದರೂ ತಾಳ್ಮೆಯಿಂದಲೇ ಎಲ್ಲರ ಜೊತೆ ಮಾತನಾಡಿ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ವೃಶ್ಚಿಕ : ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಆದರೆ ಬಾಯಿ ಚಪಲವನ್ನು ಕಡಿಮೆ ಮಾಡಿಕೊಂಡಲ್ಲಿ ಆರೋಗ್ಯ ಇನ್ನಷ್ಟು ಸುಧಾರಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ನೀವೆಂದುಕೊಂಡ ಕಾರ್ಯಗಳು ನೆರವೇರಲಿದೆ. ಅನಿರೀಕ್ಷಿತ ಮೂಲದಿಂದ ಹಣ ಹರಿದು ಬರಲಿದೆ.
ಧನು : ಹಣಕಾಸಿನ ವಿಚಾರದಲ್ಲಿ ಪ್ರಗತಿ ಕಾಣೋದ್ರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಇದರಿಂದ ನೀವು ಇಡೀ ದಿನ ಉತ್ಸಾಹದಿಂದ ಇರಲಿದ್ದೀರಿ. ಪೋಷಕರ ಮಾತಿನಿಂದ ನಿಮಗೆ ನೋವುಂಟಾಗಲಿದೆ. ಆದರೂ ತಾಳ್ಮೆ ಕಳೆದುಕೊಳ್ಳದಿರಿ.
ಮಕರ : ಕುಲದೇವರ ಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಕಚೇರಿಯಲ್ಲಿ ನಿಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾದ ಸಮಯಕ್ಕೆ ಪೂರೈಸುವ ಮೂಲಕ ಮೇಲಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸಿಕೊಳ್ಳಲಿದ್ದೀರಿ. ಅನಗತ್ಯ ವಸ್ತುಗಳ ಖರೀದಿಯನ್ನು ನಿಲ್ಲಿಸಿದಲ್ಲಿ ಮಾತ್ರ ನಿಮಗೆ ಉಳಿತಾಯ ಮಾಡಲು ಸಾಧ್ಯವಾಗಲಿದೆ.
ಕುಂಭ : ನಿಮ್ಮ ಪ್ರಾಮಾಣಿಕತೆಯು ವೃತ್ತಿ ಜೀವನದಲ್ಲಿ ಯಶಸ್ಸನ್ನು ತಂದುಕೊಡಲಿದೆ. ಆದಷ್ಟು ಹಣ ಉಳಿತಾಯ ಮಾಡೋದನ್ನು ರೂಢಿ ಮಾಡಿಕೊಳ್ಳಿ. ಕಂಡದ್ದೆಲ್ಲ ಬೇಕು ಎಂಬ ವ್ಯಾಮೋಹ ಬೇಡ.
ಮೀನ : ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳಿಗೆ ಇಂದು ಭರ್ಜರಿ ಲಾಭ ದೊರಕಲಿದೆ. ಯಾವುದೇ ವಿಚಾರದ ಬಗ್ಗೆ ಮಾತನಾಡುವ ಮುನ್ನ ನಾಲಗೆ ಮೇಲೆ ಹಿಡಿತ ಇರಲಿ. ಅಡ್ಡದಾರಿ ಹಿಡಿದು ಧನ ಲಾಭಕ್ಕೆ ಮುಂದಾಗಬೇಡಿ. ಇದರಿಂದ ಕೆಡುಕು ಉಂಟಾಗಲಿದೆ.