
ಫ್ಲರ್ಟ್ ಮಾಡೋಕೆ ಒಂದು ದಿನ ಇದೆ ಅಂದ್ರೆ ನಂಬ್ತೀರಾ? ಯಸ್. ನೀವೂ ಫ್ಲರ್ಟ್ ಮಾಡುವವರಾಗಿದ್ದರೆ ಯಾವುದು ಒಳ್ಳೆ ದಿನ ಅಂತಾ ನಾವು ಹೇಳ್ತೇವೆ ಕೇಳಿ. ಈ ದಿನ ಆನ್ಲೈನ್ ಫ್ಲರ್ಟ್ ಮಾಡಿದ್ರೆ ಹೆಚ್ಚು ಎಂಜಾಯ್ ಮಾಡುವ ಜೊತೆಗೆ ಯಶಸ್ವಿ ಕೂಡ ಆಗ್ತೀರಾ. ಸಂಶೋಧನೆ ಯಾವುದು ಒಳ್ಳೆ ದಿನ ಎಂಬುದನ್ನು ಹೇಳಿದೆ.
ಸಂಶೋಧನೆ ಪ್ರಕಾರ ವಯಸ್ಕರು ಆನ್ಲೈನ್ ಫ್ಲರ್ಟಿಂಗ್ ಹೆಚ್ಚು ಎಂಜಾಯ್ ಮಾಡಬೇಕೆಂದ್ರೆ ಗುರುವಾರದ ದಿನ ಒಳ್ಳೆಯದಂತೆ. ಮಧ್ಯದ ವಾರಕ್ಕಿಂತ ವೀಕ್ ಎಂಡ್ ನಲ್ಲಿ ಶಾರೀರಿಕ ಸಂಬಂಧ ಬೆಳೆಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಆನ್ಲೈನ್ ಫ್ಲರ್ಟಿಂಗ್ ಗೆ ಗುರುವಾರ ಉತ್ತಮ ಎನ್ನುತ್ತದೆ ಸಂಶೋಧನೆ.
ಡೇಟಿಂಗ್ ವೆಬ್ಸೈಟ್ ವಿಕ್ಟೋರಿಯಾ ಮಿಲನ್ 30 ದೇಶಗಳ 58 ಲಕ್ಷ ಗ್ರಾಹಕರ ಡೇಟಾ ರಿಸರ್ಚ್ ಮಾಡಿ ಈ ವರದಿ ನೀಡಿದೆ. ಗುರುವಾರ ಹೆಚ್ಚಿನ ಜನರು ಫ್ಲರ್ಟ್ ಮಾಡ್ತಾರೆ. ಹಾಗೆ ಗುರುವಾರ ವಿವಾಹೇತರ ಸಂಬಂಧದಲ್ಲಿ ಬ್ಯುಸಿಯಿರ್ತಾರೆಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಆನ್ಲೈನ್ ಚಾಟಿಂಗ್ ಹೆಚ್ಚಾಗಿ ಮಧ್ಯಾಹ್ನದ 2 ಗಂಟೆ ಹಾಗೂ ರಾತ್ರಿ 8 ಗಂಟೆ ನಡುವಿರುತ್ತೆ ಎಂದು ಸಂಶೋಧನೆ ಹೇಳಿದೆ.
ಬಹುತೇಕ ದೇಶಗಳ ಜನರು ಗುರುವಾರವನ್ನು ಆಯ್ಕೆ ಮಾಡಿಕೊಂಡ್ರೆ ಮತ್ತೆ ಕೆಲ ದೇಶಗಳ ಜನರು ತಮ್ಮ ದಿನವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. 10ಕ್ಕೂ ಹೆಚ್ಚು ದೇಶಗಳ ಜನರು ಸೋಮವಾರವನ್ನು ಫ್ಲರ್ಟಿಂಗ್ ಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸೋಮವಾರ ಬೇಸರದ ಹಾಗೂ ದಣಿವಿನ ದಿನ. ಈ ದಿನವನ್ನು ಎಂಜಾಯ್ ಮಾಡಲು ಸೋಮವಾರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆಂದು ಸಂಶೋಧಕರು ಹೇಳಿದ್ದಾರೆ.