
ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್ ಬಳಸುವುದು ಉತ್ತಮ. ಹಾಗಂತ ಜಗಜ್ಜಾಹೀರಾಗುವ ರೀತಿಯಲ್ಲಿ ಕಾಂಡೋಮ್ ಇಟ್ಟುಕೊಳ್ಳುವುದು ಸಾಧ್ಯವೇ? ಅದರಲ್ಲೂ ನಿಮಗಿನ್ನೂ ಮದುವೇನೇ ಆಗಿಲ್ಲ ಎಂದಾದರೆ ಕಾಂಡೋಮ್ ಅನ್ನು ಮನೆಯಲ್ಲಿ, ರೂಮ್‌ನಲ್ಲಿ ಎಲ್ಲಿ ಬಚ್ಚಿಟ್ಟುಕೊಳ್ತೀರಿ?
ವಿಶೇಷವಾಗಿ ಪಾಲಕರು, ಒಂದೇ ರೂಮ್‌ನಲ್ಲಿರುವ ಮಿತ್ರರು, ಸದಾ ಹದ್ದುಗಣ್ಣಿನಲ್ಲಿ ನೋಡುವ ಸಹೋದರರಿಂದ ಇದನ್ನು ಮರೆಮಾಚಲು ಸಾಧ್ಯವೇ? ಖಂಡಿತ ಇಲ್ಲ ವ್ಯಾಲೆಟ್, ಬೀರು ಅಥವಾ ಬ್ಯಾಗ್‌ಗಳಲ್ಲಿ ಇರಿಸಿದರೂ ಒಂದಿಲ್ಲೊಂದು ದಿನ ಅದು ಅವರ ಕಣ್ಣಿಗೆ ಬಿದ್ದೇ ಬೀಳುತ್ತೆ. ಅದೊಂಥರಾ ಮುಜುಗರದ ಸನ್ನಿವೇಶವಾಗಿ ಬಿಡುತ್ತದೆ.
ಇದನ್ನು ಮನಗಂಡ 20 ವರ್ಷದ ಯುವಕನೊಬ್ಬ ರೆಡ್ಡಿಟ್ ತಾಣದಲ್ಲಿ ಸಂಕಟ ಹೇಳಿಕೊಂಡ. “ನೀವು ಒಂಟಿಯಾಗಿದ್ದು, ಅವಿವಾಹಿತರಾಗಿದ್ದರೆ ಕಾಂಡೋಮ್ ಅನ್ನು ಎಲ್ಲಿ ಬಚ್ಚಿಡುತ್ತಿದ್ರಿ?” ಎಂದು ಸಲಹೆ ಕೇಳಿ ಪ್ರಶ್ನೆ ಮುಂದಿಟ್ಟಿದ್ದ.
BIG NEWS: ಪಠ್ಯ ಪುಸ್ತಕ ಸಮಿತಿಯಿಂದ ಮತ್ತೊಂದು ಎಡವಟ್ಟು; ಎರಡೂ ತರಗತಿಗಳಿಗೆ ಒಂದೇ ಪದ್ಯ
ಆತನಿಗಿನ್ನೂ 20 ರ ಹರೆಯ. ಒಂಟಿಯಾಗಿದ್ದಾನೆ. ಮದುವೆ ಆಗುವ ವಯಸ್ಸೂ ಆಗಿಲ್ಲ. ಲೈಂಗಿಕ ಅನುಭವ ಪಡೆಯುವ ಕಾತರ. ಕಾಂಡೋಮ್ ತಂದಾಗಿದೆ. ಪಾಲಕರೊಂದಿಗೆ ಇರುವ ಕಾರಣ ಎಲ್ಲಿ ಬಚ್ಚಿಡೋದು ಎನ್ನುವ ಸಂಕಟ. ಹೀಗಾಗಿ ರೆಡ್ಡಿಟ್ ಮೊರೆ ಹೋಗಿದ್ದಾನೆ. ಅಲ್ಲದೆ, “ನೀವು ಕಾಂಡೋಮ್‌ಗಳನ್ನು ಎಲ್ಲಿ ಮರೆಯಾಗಿರಿಸುತ್ತೀರಿ? ನೀವು ಸಿಕ್ಕಿಬಿದ್ದ ಕಥೆಗಳಿದ್ದರೆ ಶೇರ್ ಮಾಡಿ. ನಾನು ಜಾಗರೂಕರಾಗಿರಬೇಕಲ್ಲವೇ? ಎಂದೂ ಹೇಳಿಕೊಂಡಿದ್ದಾನೆ!
ರೆಡ್ಡಿಟ್ ಎಂದ ಮೇಲೆ ಸಲಹೆ ನೀಡುವವರಿಗೇನು ಕಡಿಮೆಯೇ? ಹಲವು ಕ್ರಿಯೇಟಿವ್ ಐಡಿಯಾಸ್ ಅನ್ನು ಹಂಚಿಕೊಂಡಿದ್ಧಾರೆ. ಒಬ್ಬರಂತೂ, ಅಕ್ಕಿ ಡಬ್ಬದೊಳಗೆ ಕಾಂಡೋಮ್ ಇರಿಸುವಂತೆ ಸೂಚಿಸಿದ್ದಾರೆ. ಇನ್ನೊಬ್ಬರು, ತುಂಬಾ ಕಾಂಡೋಮ್ ಖರೀದಿಸಿ ಇಟ್ಟುಕೊಳ್ಳಬೇಡಿ. ಮೂರರ ಪೊಟ್ಟಣ ಖರೀದಿ ಮಾಡಿ ಎಂದಿದ್ದಾರೆ. ಬ್ಯಾಗ್‌ನೊಳಗೆ ಒಂದು ರಹಸ್ಯ ಪಾಕೆಟ್ ಹೊಲಿಸಿ. ಅಥವಾ ನಿಮ್ಮ ಫೋನ್ ಬಾಕ್ಸ್ ಅನ್ನು ಉಪಯೋಗಿಸಿ ಎಂದೆಲ್ಲ ಸಲಹೆ ನೀಡಿದ್ದಾರೆ.