
ನಾರಾಯಣಪುರ: ಛತ್ತೀಸ್ ಗಢದ ನಾರಾಯಣಪುರ ಜಿಇಲ್ಲೆಯಲ್ಲಿ ನಕ್ಸಲರು ಕಚ್ಚಾ ಬಂಬ್ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಭದ್ರತಾಪಡೆ ಸಿಬ್ಬಂದಿ ಸ್ವಲ್ಪದರಲ್ಲಿ ಪಾರಾಗಿದ್ದಾರೆ.
ನಾರಾಯಣಪುರ ಜಿಲ್ಲೆಯ ಅಬುಜ್ ಮಾದ್ ಪ್ರದೇಶದಲ್ಲಿ ಇಂದು ಮುಂಜಾನೆ ನಕ್ಸಲರು ಕಚ್ಚಾ ಬಾಂಬ್ ಸ್ಫೋಟಿಸಿದ್ದು, ಇದರಿಂದ ಎದ್ದ ಭಾರಿ ಧೂಳು ಹಾಗೂ ಮಣ್ಣಿನಿಂದಾಗಿ ಭದ್ರತಾಪಡೆಯ ಓರ್ವ ಅಧಿಕಾರಿ ಸೇರಿ ಇಬ್ಬರು ಸಿಬ್ಬಂದಿಗಳ ಕಣ್ಣಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಘಟನಾ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಛತ್ತೀಸ್ ಗಢ ಪೊಲೀಸರು ಹಾಗೂ ಜಿಲ್ಲಾ ಮೀಸಲು ಪಡೆ , ವಿಶೇಷ ಕಾರ್ಯಪಡೆಯ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ನಕ್ಸಲರ ವಿರುದ್ಧ ಕೂಂಬಿಂಗ್ ಮುಂದುವರೆದಿದೆ.