ಟಪೋರಿ ಶೈಲಿಯಲ್ಲಿನ ವಿಡಿಯೋ ಮೂಲಕ ಅಂತರ್ಜಾಲದಲ್ಲಿ ಹಿಟ್ ಆದ ಮುಂಬೈನ 10 ವರ್ಷದ ಬಾಲಕ ಚಟ್ಪತ್ ನೆನಪಿದೆಯೇ? ಇದೀಗ ಈತ ಮತ್ತೆ, ಕ್ಯಾಡ್ಬರಿ ಇಂಡಿಯಾದ ಐಕಾನಿಕ್ ಜಾಹೀರಾತಿನ ಮರುಸೃಷ್ಟಿಯೊಂದಿಗೆ ಹಿಂತಿರುಗಿದ್ದಾನೆ.
ಕೈನಲ್ಲಿ ಹಣ ನಿಲ್ತಿಲ್ಲವೆಂದ್ರೆ ಗಣೇಶನಿಗೆ ಇದನ್ನು ಅರ್ಪಿಸಿ
ಸದ್ಯ ಇಂಟರ್ನೆಟ್ ನಲ್ಲಿ ಈ ವಿಡಿಯೋ ಹೊಸ ಸೆನ್ಸೇಷನ್ ಸೃಷ್ಟಿಸಿದೆ.
ಚಟ್ಪತ್ ನ ಚಮತ್ಕಾರಿ ಪ್ರೇರಕ ವಿಡಿಯೋಗಳಿಂದಾಗಿ ಇಂಟರ್ನೆಟ್ ನಲ್ಲಿ ಹೊಸ ಸಂವೇದನೆ ಸೃಷ್ಟಿಸಲು ಕಾರಣವಾಗಿತ್ತು. ನಂತರ, ಬಾಲಕ ಹಿಂದುಳಿದ ಮಕ್ಕಳ ಸಮಗ್ರ ಅಭಿವೃದ್ಧಿಗೆ ಮೀಸಲಾಗಿರುವ ಎಸ್ಒಎಸ್ ಚಿಲ್ಡ್ರನ್ಸ್ ವಿಲೇಜಸ್ ಇಂಡಿಯಾ ಹೆಸರಿನ ಎನ್ ಜಿಒದೊಂದಿಗೆ ಸಹಕರಿಸಿದ್ದ. ಇತ್ತೀಚಿನ ಪೋಸ್ಟ್‌ನಲ್ಲಿ, ಎನ್‌ಜಿಒಗೆ ದೇಣಿಗೆ ನೀಡುವಂತೆ ಜನರನ್ನು ಒತ್ತಾಯಿಸಲು 90ರ ದಶಕದ ಕ್ಯಾಡ್‌ಬರಿ ಐಕಾನಿಕ್ ಜಾಹೀರಾತನ್ನು ಚಟ್ಪತ್ ಮರುಸೃಷ್ಟಿಸಿದ್ದಾನೆ.
ಅತೀವೃಷ್ಟಿಯಿಂದ ಬೆಳೆ, ಮನೆ ಹಾನಿ: ರೈತರು, ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮಾ
ಹೌದು 10 ರ ಬಾಲಕ 90 ರ ದಶಕದ ಕ್ಯಾಡ್ಬರಿ ಜಾಹೀರಾತಿನ ಮನರಂಜನೆಯೊಂದಿಗೆ ಮತ್ತೆ ಇಂಟರ್ನೆಟ್ ಗೆ ಹಿಂತಿರುಗಿದ್ದಾನೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಚಟ್ಪತ್, ಜಾಹೀರಾತಿನಲ್ಲಿ ಮಾಡೆಲ್ ಅಭಿನಯಿಸಿದ್ದನ್ನು ಮರುಸೃಷ್ಟಿಸಿದ್ದಾನೆ. ಮೂಲ ಜಾಹೀರಾತಿಗಿಂತ ಸ್ವಲ್ಪ ಭಿನ್ನವಾಗಿ, ಕೊಳೆಗೇರಿ ಪ್ರದೇಶದ ಬ್ಯಾಕ್ ಡ್ರಾಪ್‌ನಲ್ಲಿ ವಿಡಿಯೊ ಚಿತ್ರೀಕರಿಸಲಾಗಿದೆ.
ಕ್ಲಿಪ್‌ನಲ್ಲಿ ಚಟ್ಪತ್ ಮತ್ತು ಅವನ ಸ್ನೇಹಿತರು, ಮೂಲ ವಿಡಿಯೋದ ಪ್ರತಿಯೊಂದು ಅಂಶಗಳನ್ನು ಸಂಪೂರ್ಣವಾಗಿ ಸೆರೆ ಹಿಡಿದಿದ್ದಾರೆ. ಸದ್ಯ ಇದು ನೆಟ್ಟಿಗರ ಮನಗೆದ್ದಿದ್ದು, ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
https://www.youtube.com/watch?v=hqxydgjPmUw