ಚಿಕ್ಕಮಗಳೂರು: ಚಾರ್ಮಡಿಘಾಟಿಯಲ್ಲಿ 16 ಚಕ್ರದ ಲಾರಿಯೊಂದು ಕೆಟ್ಟುನಿಂತ ಪರಿಣಾಮ ಇತರ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಸಂಭವಿಸಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಸಿಮೆಂಟ್ ತುಂಬಿದ್ದ 16 ಚಕ್ರದ ಲಾರಿ ಚಾರ್ಮಡಿಘಾಟಿಯ 10ನೇ ತಿರುವಿನಲ್ಲಿ ಟರ್ನ್ ಮಾಡಲಾಗದೇ ಕೆಟ್ಟು ನಿಂತಿದೆ. ಇದರಿಂದ ಇತರ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ.
ಚಾರ್ಮಡಿಘಾಟಿಯಲ್ಲಿ 10 ಚಕ್ರದ ವಾಹನಕ್ಕಿಂತ ಭಾರಿ ಗಾತ್ರದ ವಾಹನಗಳಿಗೆ ನಿಷೇಧವಿದೆ. ಹೀಗಿದ್ದರೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ದರೂ ಈ ಲಾರಿಗೆ ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ.
ಮುಂಜಾನೆಯಿಂದಲೂ ಚಾರ್ಮಡಿಘಾಟಿಯಲ್ಲಿ ಟ್ರಾಫಿಕ್ ಜಾಮ್ ನಿಂದ ಜನರು ಪರದಾಡುತ್ತಿದ್ದು, ಪೊಲೀಸರು ಬೃಹತ್ ವಾಹನ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.