ಆಚಾರ್ಯ ಚಾಣಕ್ಯನ ನೀತಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ರಾಜಕಾರಣದಿಂದ ಹಿಡಿದು ಸಾಂಸಾರಿಕ ವಿಚಾರಗಳ ಬಗ್ಗೆ ಚಾಣಕ್ಯ ವಿಸ್ತಾರವಾಗಿ ಹೇಳಿದ್ದಾನೆ. ಮನುಷ್ಯನ ಯಶಸ್ಸಿನ ಗುಟ್ಟು, ಪತ್ನಿಯಾಗುವವಳು ಹೇಗಿರಬೇಕೆನ್ನುವ ಬಗ್ಗೆಯೂ ಚಾಣಕ್ಯ ತನ್ನ ನೀತಿಯಲ್ಲಿ ವಿವರಿಸಿದ್ದಾನೆ.
ಕೆಲವೊಂದು ವಿಷಯಗಳು ನಾವು ಜನಿಸುವ ಮುನ್ನವೇ ನಿರ್ಧಾರವಾಗಿರುತ್ತದೆ. ತಾಯಿ ಗರ್ಭದಲ್ಲಿರುವಾಗಲೇ ನಮ್ಮ ಜೀವನದ ಕೆಲ ವಿಷಯಗಳು ನಿರ್ಧಾರವಾಗಿರುತ್ತದೆ ಎಂದು ಚಾಣಕ್ಯ ಹೇಳಿದ್ದಾನೆ.
ಮಗು ಎಷ್ಟು ವರ್ಷಗಳ ಕಾಲ ಬದುಕಿರುತ್ತದೆ ಎನ್ನುವ ವಿಚಾರ ಗರ್ಭದಲ್ಲಿಯೇ ನಿಗದಿಯಾಗಿರುತ್ತದೆಯಂತೆ.
ದೊಡ್ಡದಾದ ಮೇಲೆ ಮಗು ಯಾವ ಕಾರ್ಯದಲ್ಲಿ ನಿಪುಣತೆ ಹೊಂದುತ್ತದೆ ಹಾಗೂ ಭವಿಷ್ಯದಲ್ಲಿ ಏನು ಕೆಲಸ ಮಾಡುತ್ತದೆ ಎಂಬುದು ಕೂಡ ಗರ್ಭದಲ್ಲಿಯೇ ನಿರ್ಣಯವಾಗಿರುತ್ತದೆ.
ಮಗುವಿನ ಬಳಿ ಎಷ್ಟು ಹಣ, ಸಂಪತ್ತು ಇರುತ್ತದೆ ಎನ್ನುವ ವಿಚಾರ ಕೂಡ ಗರ್ಭದಲ್ಲಿಯೇ ತೀರ್ಮಾನವಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾನೆ.
ಶಿಶುವಿನ ಸಾವಿನ ದಿನ ಕೂಡ ಗರ್ಭದಲ್ಲಿಯೇ ನಿರ್ಧಾರವಾಗಿರುತ್ತದೆಯಂತೆ.