ಜಾತಕದಲ್ಲಿ ಒಂಭತ್ತು ಗ್ರಹಗಳಲ್ಲಿ ಯಾವುದೇ ಗ್ರಹ ದೋಷವಿದ್ದರೂ ದೇವಾನುದೇವತೆಗಳ ಕೃಪೆ ಸಿಗೋದು ಕಷ್ಟ. ಇದ್ರಿಂದ ಕೆಲಸದಲ್ಲಿ ಅಸಫಲತೆ ಪ್ರಾಪ್ತಿಯಾಗುತ್ತದೆ. ಅದೃಷ್ಟ ಒಲಿಯುವುದಿಲ್ಲ. ಗ್ರಹ ದೋಷ ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಬಹುತೇಕ ಪೂಜೆ-ಪುನಸ್ಕಾರಗಳನ್ನು ಸ್ನಾನ ಮಾಡಿಯೇ ಮಾಡಬೇಕು. ಆದ್ರೆ ಕೆಲವೊಂದು ಶುಭ ಕೆಲಸಗಳನ್ನು ಸ್ನಾನ ಮಾಡದೆ ಮಾಡಬೇಕು.
ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಹಸ್ತವನ್ನು ನೋಡ್ತಾ ಕರಾಗ್ರೆ ವಸತೇ ಲಕ್ಷ್ಮಿ: ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೆ ಗೌರಿ: ಪ್ರಭಾತೆ ಕರ ದರ್ಶನಂ ಎಂಬ ಮಂತ್ರವನ್ನು ಪಠಿಸಬೇಕು. ಇದು ಸ್ನಾನ ಮಾಡದೆ ಮಾಡುವ ಕೆಲಸ.
ಇದ್ರ ಜೊತೆಗೆ ಬ್ರಹ್ಮ ಮುರಾರಿ ತ್ರಿಪುರಾಂತಕಾರಿ : ಭಾನು ಶಶಿ ಭೂಮಿಸುತೆ ಬುಧಶ್ಯ: ಗುರುಶ್ಯ ಶುಕ್ರ : ಶನಿ ರಾಹು ಕೇತುಹ: ಕುರ್ವೇಂತು ಸರ್ವೆ ಮಮಸುಪ್ರಭಾತಂ: ಮಂತ್ರವನ್ನು ಪಠಿಸಬೇಕು. ಈ ಮಂತ್ರ ಪಠಣೆಯಿಂದ ಬ್ರಹ್ಮ, ವಿಷ್ಣು, ಶಿವ, ಸೂರ್ಯ, ಶುಭ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಎಲ್ಲರೂ ಪ್ರಸನ್ನರಾಗ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.