ನವದೆಹಲಿ : ನಾಳೆ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯಾಗಲಿದ್ದು, ಶುಭ ಮುಹೂರ್ತದಲ್ಲಿ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.
ದೇಶಾದ್ಯಂತ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಭಾರೀ ತಯಾರಿ ನಡೆಸಲಾಗಿದ್ದು, ಈ ನಡುವೆ ಮುಸ್ಲಿಂ ಮೌಲ್ವಿಯೊಬ್ಬರು ರಾಮಮಂದಿರ ಪ್ರಾಣಪ್ರತಿಷ್ಠಾಪನೆ ದಿನ ಮಸೀದಿ, ದರ್ಗಗಳಲ್ಲಿ ರಾಮನಾಮ ಜಪಿಸಿ ದೀಪ ಬೆಳಗಿಸಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಮೌಲ್ವಿ, ನನ್ನ ಎಲ್ಲಾ ಮುಸಲ್ಮಾನ ಭಾಂಧವರಿಗೆ ನಾನು ವಿನಂತಿ ಮಾಡುವುದೇನೆಂದರೆ, ಜನವರಿ 22 ರಂದು ಶ್ರೀರಾಮ, ಜಯರಾಮ ಜಪಿಸಿ, ಮುಸ್ಲಿಂರು ತಮ್ಮ ಮನೆಗಳು,ಮಸೀದಿಗಳು ಹಾಗೂ ದರ್ಗಾಗಳಲ್ಲಿ ದೀಪ ಬೆಳಗಿಸಿ ಎಂದು ಹೇಳಿದ್ದಾರೆ.