ನಿಮ್ಮ ಮನೆಯನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದು, ಅಡುಗೆ ಅನಿಲ ಸಂಪರ್ಕವನ್ನು ನಿಮ್ಮ ಹೊಸ ವಿಳಾಸಕ್ಕೆ ಲಿಂಕ್ ಮಾಡಬೇಕೇ ? ಹಾಗಾದರೆ ಈ ಮಾಹಿತಿ ನಿಮಗೆ ನೆರವಾಗುತ್ತದೆ.
ದೇಶದಲ್ಲಿ ಅಡುಗೆ ಅನಿಲ ಪೂರೈಕೆ ಮಾಡುವ ಎಲ್ಲಾ ಮೂರು ಸಂಸ್ಥೆಗಳಾದ ಭಾರತ್ ಗ್ಯಾಸ್, ಇಂಡೇನ್ ಹಾಗೂ ಎಚ್‌ಪಿ ಗ್ಯಾಸ್ ತಮ್ಮ ಗ್ರಾಹಕರಿಗೆ ಸಂಪರ್ಕ ಸ್ಥಳಾಂತರದ ಆಯ್ಕೆ ನೀಡುತ್ತವೆ.
ವಿಳಾಸದ ಬದಲಾವಣೆ ಮಾತ್ರವಲ್ಲದೇ ವಿತರಕರ ಬದಲಾವಣೆಯ ಆಯ್ಕೆಯನ್ನೂ ಎಲ್.ಪಿ.ಜಿ. ಪೂರೈಕೆದಾರರು ನಿಮಗೆ ಕೊಟ್ಟಿವೆ. ಈ ಪ್ರಕ್ರಿಯೆ ಬಹಳ ಸರಳವಾಗಿದೆ:
BIG NEWS: ಮೊದಲ ಯತ್ನದಲ್ಲೇ ಗೆದ್ದು ಬೀಗಿದ ಸೂರಜ್ ರೇವಣ್ಣ; ಮೇಲ್ಮನೆಗೆ ಎಂಟ್ರಿ
1. ಮೊದಲಿಗೆ ನಿಮ್ಮ ಸಂಪರ್ಕ ನೋಂದಣಿಯಾಗಿರುವ ಎಲ್.ಪಿ.ಜಿ ವಿತರಕರನ್ನು ಭೇಟಿ ಮಾಡಿ. ನಿಮ್ಮ ಗ್ಯಾಸ್ ಸಿಲಿಂಡರ್ ಹಾಗೂ ರೆಗ್ಯೂಲೇಟರ್ ಅನ್ನು ಅವರಿಗೆ ಸಲ್ಲಿಸಿ, ನೀವು ಹಿಂದೆ ಠೇವಣಿ ಇಟ್ಟಿದ್ದ ದುಡ್ಡನ್ನು ಮರಳಿ ಪಡೆಯಿರಿ.
2. ಚಾಲ್ತಿಯಲ್ಲಿರುವ ವಿತರಕರಿಂದ ಇ-ಗ್ರಾಹಕ ವರ್ಗಾವಣೆ ರಸೀದಿ (ಇ-ಸಿಟಿಎ) ಪಡೆದುಕೊಳ್ಳಿ. ಚಂದಾದಾರಿಕೆಯ ವೌಚರ್ ಅಥವಾ ಆಥರೈಸೇಷನ್ ಕೋಡ್ ಎಂದು ಇದನ್ನು ಕರೆಯಲಾಗುತ್ತದೆ. ಒಂದು ವೇಳೆ ನೀವು ಬೇರೊಂದು ನಗರಕ್ಕೆ ಸ್ಥಳಾಂತರವಾಗುತ್ತಿದ್ದಲ್ಲಿ, ಗ್ಯಾಸ್ ಡೀಲರ್ ನಿಮಗೆ ಟರ್ಮಿನೇಷನ್ ವೌಚರ್ ನೀಡುತ್ತಾರೆ.
3. ನಿಮ್ಮ ಹೊಸ ಜಾಗಕ್ಕೆ ಹತ್ತಿರವಾದ ಗ್ಯಾಸ್ ಏಜೆನ್ಸಿಗೆ ಹೋಗಿ, ಹಿಂದಿನ ಡೀಲರ್‌ನಿಂದ ಪಡೆದುಕೊಂಡ ನಿಮ್ಮ ಬಳಿ ಇರುವ ಚಂದಾದಾರಿಕೆಯ ವೌಚರ್ ತೋರಿಸಿ. ಹೊಸ ವಿತರಕರಿಂದ ಎಂಡಾರ್ಸ್ಮೆಂಟ್ ಪಡೆದ ಬಳಿಕ ನಿಮ್ಮ ಬಳಿ ಚಾಲ್ತಿಯಲ್ಲಿರುವ ಗ್ಯಾಸ್ ಗ್ರಾಹಕ ಕಾರ್ಡ್ ಅನ್ನು ಬಳಸಲು ಮುಂದುವರೆಸಬಹುದು.
4. ಮರುಸಂಪರ್ಕಕ್ಕಾಗಿ; ನಮೂದಿಸಲಾದ ಮೊತ್ತವನ್ನು ಪಾವತಿಸಿ. ಹೊಸ ಚಂದಾದಾರಿಕೆಯ ವೌಚರ್ ಪಡೆದುಕೊಂಡು, ನಿಮ್ಮ ಹೆಸರಿನಲ್ಲಿ ಎಲ್.ಪಿ.ಜಿ ಸಂಪರ್ಕವನ್ನು ಪಡೆಯಿರಿ.